×
Ad

ಪ್ರಮೀಳಾ ದೀಪಕ್‌ಗೆ ಕಾವ್ಯಶ್ರೀ ಪ್ರಶಸ್ತಿ

Update: 2017-02-10 19:23 IST

ಮಂಗಳೂರು, ಫೆ. 10: ಯುವ ಸಾಹಿತಿ, ಬರಹಗಾರ್ತಿ, ಕವಯತ್ರಿ ಪ್ರಮೀಳಾ ದೀಪಕ್ ಪೆರ್ಮುದೆ ಅವರಿಗೆ ರಾಜ್ಯ ಮಟ್ಟದ ಕಾವ್ಯಶ್ರೀ ಪ್ರಶಸ್ತಿ ಲಭಿಸಿದ್ದು ಮಂಡ್ಯದ ನಾಲ್ವಡಿ ಕೃಷ್ಣರಾಜ ಒಡೆಯರ್‌ರಂಗ ಮಂದಿರದಲ್ಲಿ ನಡೆದಿರುವ ಸಮಾರಂಭದಲ್ಲಿ ಮಂಡ್ಯ ಜಿಲ್ಲಾ  ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಡಾ.ಎಚ್.ಎಸ್ ಮುದ್ದೇಗೌಡ ಪ್ರಶಸ್ತಿ ಪ್ರದಾನ ಮಾಡಿದರು.

ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸರ್.ಎಂ ವಿಶ್ವೇಶ್ವರಯ್ಯ ಅವರ ಸ್ಮರಣಾರ್ಥ ನಡೆದಿರುವ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಪ್ರಮೀಳಾ ದೀಪಕ್‌ಅವರ ಕವನ ಅಯ್ಕೆಗೊಂಡಿದ್ದು, 20ನೆ ವರುಷದ ಕಾವ್ಯಶ್ರೀ ಪ್ರಶಸ್ತಿ ಭಿಸಿದೆ.

ಡಾ.ಜಿ.ಶಂ.ಪ ಸಾಹಿತ್ಯ ವೇದಿಕೆ ಮಂಡ್ಯ, ಕನ್ನಂಬಾಡಿ ದಿನಪತ್ರಿಕೆ ಮಂಡ್ಯ, ಅಖಿಲ ಕರ್ನಾಟಕ ಪರಿಸರ ಜಾಗೃತಿ ವೇದಿಕೆ ಮೈಸೂರು, ಇವರ ಸಂಯುಕ್ತ ಆಶ್ರಯದಲ್ಲಿ ನಡೆದಿರುವರಾಜ್ಯ ಮಟ್ಟದ ಕ ಕಾವ್ಯ ಮೇಳದಲ್ಲಿ ಪ್ರಶಸ್ತಿ ಪ್ರದಾನ ನಡೆಸಲಾಗಿದೆ.

 ಮೂಲತಃ ಮಂಗಳೂರು ತಾಲೂಕು ಸುರತ್ಕಲ್ ಸಮೀಪದ ಕೊಡಿಪಾಡಿಯವರಾಗಿರುವ ಪ್ರಮೀಳಾ ದೀಪಕ್‌ರವರು ಸಂಘಟಕ, ಸಾಮಾಜಿಕ ಕಾರ್ಯಕರ್ತ ದೀಪಕ್‌ರವರ ಪತ್ನಿ. ಈಗಾಗಲೇ ಕಿತ್ತೂರು ರಾಣಿ ಚೆನ್ನಮ್ಮ, ಸರ್.ಎಂ.ವಿಶ್ವೇಶ್ವರಯ್ಯ ರಾಷ್ಟ್ರ ಪ್ರಶಸ್ತಿ ಪಡೆದಿರುವ ಇವರು ಪ್ರಸ್ತುತ ಒಎಂಪಿಎಲ್ ಉದ್ಯೋಗಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News