×
Ad

ಕೊಂಕಣಿ ಕಲೋತ್ಸವದಲ್ಲಿ ಆಕರ್ಷಕ ಪ್ರದರ್ಶನ ಮಳಿಗೆಗಳು

Update: 2017-02-10 20:25 IST

ಮಂಗಳೂರು, ಫೆ. 10: ಪುರಭವನದ ಎದುರು ವ್ಯವಸ್ಥೆ ಮಾಡಲಾಗಿರುವ ಕೊಂಕಣಿ ಸಂತೆಯಲ್ಲಿ ಹಲವು ಅಂಗಡಿ ಮುಗ್ಗಟ್ಟುಗಳಲ್ಲಿ ಕೊಂಕಣಿ ಪಾರಂಪರಿಕ ಪಂಗಡಗಳು ಉತ್ಪಾದಿಸುವ ಕಾಡುತ್ಪತ್ತಿ ಹಾಗೂ ಇತರ ಪಾರಂಪರಿಕ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಜನರ ಗಮನ ಸೆಳೆಯುತ್ತಿದೆ.

ಅಲ್ಲಿಯೇ ಪಕ್ಕದಲ್ಲಿ ವಿವಿಧ ಕೊಂಕಣಿ ಜನವರ್ಗದವರ ಸಾಂಸ್ಕೃತಿಕ ಬದುಕಿನ ವಸ್ತುಗಳ ಸುಂದರ ಪ್ರದರ್ಶನ ಎಲ್ಲರ ಗಮನ ಸೆಳೆಯುತ್ತಿದೆ. ಹಳೆಯ ಕಾಲದಲ್ಲಿ ಕೃಷಿ, ಪಾರಂಪರಿಕ ಉದ್ದಿಮೆಗಳು, ಜೀವನಾವರ್ತನ ಸಂಸ್ಕಾರಗಳ ಸಂದರ್ಭದಲ್ಲಿ ಬಳಸಲ್ಪಡುತ್ತಿದ್ದ ಹಾಗೂ ಇಂದು ನಿತ್ಯ ಬದುಕಿನಿಂದ ದೂರವಾಗಿರುವ ವಿವಿಧ ವಸ್ತುಗಳ ಸಂಗ್ರಹ ಆಯೋಜಿಸಲಾಗಿದೆ. ಮಾಂಡ್ ಸೊಭಾಣ್, ವಿಶ್ವ ಕೊಂಕಣಿ ಕೇಂದ್ರ, ಮಾರಿಲ್ ಇಗರ್ಜಿ ಹಾಗೂ ಇನ್ನಿತರ ವಿವಿಧ ಸಂಸ್ಥೆಗಳು ಈ ಪ್ರದರ್ಶನದ ವ್ಯವಸ್ಥೆ ಮಾಡಿದೆ.

ನೆರೆದ ಜನರಿಗೆ ಆಹಾರದ ವ್ಯವಸ್ಥೆ ಮಾಡಿರುವುದು ಈ ಮಹೋತ್ಸವದ ಇನ್ನೊಂದು ಹಿರಿಮೆ. ಬೆಳಗ್ಗೆ ನೆರೆದ ಎಲ್ಲರಿಗೂ ಇಡ್ಲಿ ವಡಾ ಸಾಂಬಾರ್ ಚಟ್ನಿ, ಕಾರ್ಕಳ ಕೇಕ್ ಎನ್ನುವ ಕೊಂಕಣಿ ವಿಶೇಷ ಸಿಹಿ ತಿಂಡಿ ಮತ್ತು ಚಹಾ ಕಾಫಿಯ ವ್ಯವಸ್ಥೆ ಮಾಡಲಾಗಿತ್ತು. ಅಪರಾಹ್ಣ ಚಪಾತಿ, ಆಲೂ ಮಟ್ಟರ್, ಹಿಂಗು ಹಾಕಿ ತಿಂಗಳವರೆ ಗಸಿ, ಬೀನ್ಸ್ ಬಟಾಟೆ ಉಪ್ಕರಿ, ಹಾಗಲಕಾಯಿ ಪೋಡಿ, ದಾಲ್ ತೋವೆ, ಕೆಂಪು ಸಾರು ಮತ್ತು ಬಟಾಟೆ ಹಪ್ಪಳ, ಮಿಕ್ಸ್ ವೆಜಿಟೆಬಲ್ ಉಪ್ಪಿನ ಕಾಯಿ, ಕಡಲೆ ಬೇಳೆ ಗೇರು ಬೀಜ ಪಾಯಸ, ಕೊಂಕಣಿ ತಾಕ್ ಸೇರಿದಂತೆ ಭೋಜನವ್ಯವಸ್ಥೆ ಮಾಡಲಾಗಿತ್ತು. ಬೆಳ್ತಿಗೆ ಕುಚ್ಚಲಕ್ಕಿ ಅನ್ನ ಎರಡನ್ನು ವ್ಯವಸ್ಥೆ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News