ಕಾರ್ಪೊರೇಶನ್ ಬ್ಯಾಂಕ್‌ನ ಮೂರನೆ ತ್ರೈಮಾಸಿಕ ಪ್ರಗತಿ :159.05 ಕೋಟಿ ರೂ ನಿವ್ವಳ ಲಾಭಗಳಿಕೆ - ಜೈ ಕುಮಾರ್ ಗಾರ್ಗ್

Update: 2017-02-10 15:03 GMT

ಮಂಗಳೂರು,ಫೆ.10:ಕಾರ್ಪೊರೇಶನ್ ಬ್ಯಾಂಕ್ 2016-17ನೆ ಆರ್ಥಿಕ ವರ್ಷದ ಮೂರನೆ ತ್ರೈಮಾಸಿಕ ಅವಧಿಯಲ್ಲಿ 159.05 ಕೋಟಿ ರೂ ನಿವ್ವಳ ಲಾಭಗಳಿಸಿದೆ ಎಂದು ಬ್ಯಾಂಕಿನ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೈ ಕುಮಾರ್ ಗಾರ್ಗ್ ತಿಳಿಸಿದ್ದಾರೆ.

ಕಾರ್ಪೊರೇಶನ್ ಬ್ಯಾಂಕಿನ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಇಂದು ಮಾತನಾಡುತ್ತಿದ್ದರು.

ಕಾರ್ಪೋರೇಶನ್ ಬ್ಯಾಂಕ್ ಮೂರನೆ ತ್ರೈಮಾಸಿಕ ಅವಧಿಯಲ್ಲಿ ಒಟ್ಟು 3,58,396.30 ಕೋಟಿ ರೂಪಾಯಿ ಆರ್ಥಿಕ ವ್ಯವಹಾರ ನಡೆಸಿದೆ. 2,23,384.02 ಕೋಟಿ ಠೇವಣಿ ಸಂಗ್ರಹವಾಗಿದೆ.ಸಾಲ ನೀಡಿಕೆ ಸ್ವಲ್ಪ ಕಡಿಮೆಯಾಗಿದೆ.1,35,012.28 ಕೋಟಿ ರೂಗಳಾಗಿದೆ.ಉಳಿತಾಯ ಖಾತೆಯ ಮೂಲಕ 40,650.87 ಕೋಟಿ ರೂ ಠೇವಣಿ ಸಂಗ್ರಹವಾಗಿದೆ.ಚಾಲ್ತಿ ಖಾತೆಯ ಮೂಲಕ 13,375.28 ಕೋಟಿ ರೂ ಸಂಗ್ರಹವಾಗಿದೆ .ಒಟ್ಟು ‘ಕಾಸಾ ’ಮೂಲಕ 54,026.15 ಕೋಟಿ ರೂ ಸಂಗ್ರಹವಾಗಿದೆ ಇದರೊಂದಿಗೆ ಶೇ 38.36 ಪ್ರಗತಿ ಸಾಧಿಸಲಾಗಿದೆ ಎಂದು ಜೈ ಕುಮಾರ್ ಗಾರ್ಗ್ ತಿಳಿಸಿದ್ದಾರೆ.

ಬ್ಯಾಂಕ್ ಎರಡನೆ ತ್ರೈಮಾಸಿಕ ಅವಧಿಯಲ್ಲಿ 3,54,431 ಕೋಟಿ ರೂ ಆರ್ಥಿಕ ವ್ಯವಹಾರ ನಡೆಸಿದೆ.32,260 ಕೋಟಿ ರೂ ಉಳಿತಾಯ ಖಾತೆಯ ಮೂಲಕ ಠೇವಣಿ ಸಂಗ್ರಹಿಸಲಾಗಿದೆ.1,38,316 ಕೋಟಿ ರೂ ಸಾಲ ನೀಡಲಾಗಿದೆ.ಬ್ಯಾಂಕಿನ ನಿರ್ವಹಣಾ ಲಾಭಗಳಿಕೆ 1267 ಕೋಟಿ ರೂ ಗಳಿಕೆ ಏರಿಕೆಯಾಗಿದೆ. ಪ್ರಥಮ ತ್ರೈಮಾಸಿಕ ಅವಧಿಯಲ್ಲಿ ಬ್ಯಾಂಕಿನ ಲಾಭಗಳಿಕೆ 36 ಕೋಟಿ,ಆರ್ಥಿಕ ವ್ಯವಹಾರ 3,35,445 ಕೋಟಿ ರೂ ನಿರ್ವಹಣಾ ಲಾಭಗಳಿಕೆ 797 ಕೋಟಿ ರೂ ,ಠೇವಣಿ ಸಂಗ್ರಹ 1,98,502 ಕೋಟಿ ರೂ ಗಳಾಗಿತ್ತು ಎಂದು ಜೈ ಕುಮಾರ್ ಗಾರ್ಗ್ ತಿಳಿಸಿದ್ದಾರೆ.

ಕಳೆದ ಒಂಭತ್ತು ತಿಂಗಳ ಅವಧಿಯಲ್ಲಿ ಬ್ಯಾಂಕ್ 3,58,396.30 ಕೋಟಿ ರೂ ಆರ್ಥಿಕ ವ್ಯವಹಾರ ನಡೆಸಿ 401.23 ಕೋಟಿ ರೂ ನಿವ್ವಳ ಲಾಭ ಗಳಿಸಿದೆ.ಬ್ಯಾಂಕ್ ಎಟಿಎಂಗಳ ಸಂಖ್ಯೆ ಕಳೆದ ವರ್ಷ 3040ಆಗಿತ್ತು.ಈ ಬಾರಿ 3150ಕ್ಕೆ ಏರಿಕೆಯಾಗಿದೆ ಠೇವಣಿ ಸಂಗ್ರಹದಲ್ಲಿ ಶೇ 12.97 ಏರಿಕೆಯಾಗಿದೆ ಎಂದು ಜೈ ಕುಮಾರ್ ಗಾರ್ಗ್ ತಿಳಿಸಿದ್ದಾರೆ.

ಸುದ್ದಿಗೊಷ್ಠಿಯಲ್ಲಿ ಬ್ಯಾಂಕಿ ಕಾರ್ಯನಿರ್ವಾಹಕ ನಿರ್ದೇಶಕ ಜಿ.ಎಂ.ಭಗತ್,ಸುನಿಲ್ ಮೆಹ್ತಾ ಹಾಗೂ ಮಹಾ ಪ್ರಬಂಧಕ ಎಂ.ಬಿ.ಗಣೇಶ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News