ಕೊಂಕಣಿ ಲೋಕೋತ್ಸವ ಕಾರ್ಯಕ್ರಮ
ಮಂಗಳೂರು, ಫೆ. 10: ಕೊಂಕಣಿ ಲೋಕೋತ್ಸವದಲ್ಲಿ ಸಭಾ ಕಾರ್ಯಕ್ರಮದ ನಂತರ ವಿವಿಧ ಶಾಲಾ ತಂಡಗಳ ವಿದ್ಯಾರ್ಥಿಗಳ ಸಾಂಸ್ಕೃತಿಕ ಸ್ಪರ್ಧೆಗಳು ನಡೆದವು. ಸೆಕ್ರೇಡ್ ಹಾರ್ಟ್ ಶಾಲೆ ಕುಲಶೇಖರ , ಲೂರ್ಡ್ಸ್ ಸೆಂಟ್ರಲ್ ಸ್ಕೂಲ್ ಬಿಜೈ, ಸೈಂಟ್ ಆ್ಯನ್ಸ್ ಆಂಗ್ಲ ಮಾಧ್ಯಮ ಶಾಲೆ ಕೆಲರಾಯ್, ಸೈಂಟ್ ಜೋಸೆಫ್ಸ್ ಪ್ರೈಮರಿ ಸ್ಕೂಲ್ ಕುಲಶೇಖರ, ಸೈಂಟ್ ಮೇರಿಸ್ ಸ್ಕೂಲ್ ಪಳ್ನೀರ್, ನಿತ್ಯಾಧಾರ್ ಸ್ಕೂಲ್ ಪೆರ್ಮನ್ನೂರ್, ಮಿಲಾಗ್ರಿಸ್ ಆಂಗ್ಲ ಪ್ರಾಥಮಿಕ ಶಾಲೆ ಮಂಗಳೂರು, ಅಮೃತ್‌ಲಾಲ್‌ಜಿ ಸ್ಕೂಲ್ ಕೆಲರಾಯ್, ಸೈಂಟ್ ಅಲೋಶಿಯಸ್ ಗೊನ್ಝಾಗಾ ಸ್ಕೂಲ್ ಮಂಗಳೂರು, ಕೆನರಾ ಗರ್ಲ್ಸ್ ಸ್ಕೂಲ್ ಡೊಂಗರಕೇರಿ, ಕೆನರಾ ಹೈಸ್ಕೂಲ್ ಉರ್ವಾ, ನಳಂದಾ ಆಂಗ್ಲ ಮಾಧ್ಯಮ ಶಾಲೆ ಮಂಗಳೂರು ಶಾಲೆಗಳ ತಂಡಗಳು ಭಾಗವಹಿಸಿದ್ದವು.
ಸ್ಪರ್ಧೆಗಳಲ್ಲಿ ಪ್ರತಿಭಾವಂತ ತಂಡ ಪ್ರಶಸ್ತಿಯನ್ನು ಸೈಂಟ್ ಅಲೋಶಿಯಸ್ ಗೊನ್ಝಾಗಾ ಸ್ಕೂಲ್ ಪಡೆದರೆ, ಅತ್ಯುತ್ತಮ ತಂಡ ಪ್ರಶಸ್ತಿಯನ್ನು ಲೂರ್ಡ್ಸ್ ಸೆಂಟ್ರಲ್ ಸ್ಕೂಲ್ ಬಿಜೈ ಪಡೆದುಕೊಂಡಿತು. ಉತ್ತಮ ತಂಡ ಪ್ರಶಸ್ತಿಯನ್ನು ಕೆನರಾ ಹೈಸ್ಕೂಲ್ ಉರ್ವಾ ಪಡೆಯಿತು. ಸುಮಾರು ನೂರಕ್ಕೂ ಮಿಕ್ಕಿ ಬಾಲ ಪ್ರತಿಭೆಗಳು ಲೋಕೋತ್ಸವದ ವೇದಿಕೆಯನ್ನು ಹತ್ತಿ ತಮ್ಮ ನಾಟ್ಯ, ನಟನೆ, ಗಾಯನದ ಪ್ರತಿಭೆಯನ್ನು ಪ್ರದರ್ಶಿಸಿದರು.