ಚಿದಂಬರ ಬೈಕಂಪಾಡಿಯವರ ‘ಮರೆಯಲಾಗದ ಮುಂಬೈ’ ಪುಸ್ತಕ ಬಿಡುಗಡೆ
ಮಂಗಳೂರು, ಫೆ. 10: ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಅವರ ಮರೆಯಲಾಗದ ಮುಂಬೈ ಪುಸ್ತಕ ಬಿಡುಗಡೆ ಬಿಡುಗಡೆ ಸಮಾರಂಭ ಕಡಲ ತಡಿ ಪಣಂಬೂರು ಬೀಚ್‌ನಲ್ಲಿ ರವಿವಾರ ಸಂಜೆ ನಡೆಯಿತು. ಇದು ಚಿದಂಬರ ಬೈಕಂಪಾಡಿ ಅವರ ಆರನೆಯ ಪುಸ್ತಕ.
ಹರೇಕಳ ಹಾಜಬ್ಬ ಅವರು ಪುಸ್ತಕ ಬಿಡುಗಡೆ ಮಾಡಿದರು. ಸಭೆಯ ಅಧ್ಯಕ್ಷತೆಯನ್ನು ಕಾರ್ಯನಿರ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಪ್ರೆಸ್ ಕ್ಲಬ್ ಅಧ್ಯಕ್ಷ ರೊನಾಲ್ಡ್ ಅನಿಲ್ ಫೆರ್ನಾಂಡಿಸ್, ಪತ್ರಿಕಾ ಭವನ ಟ್ರಸ್ಟ್‌ನ ಅಧ್ಯಕ್ಷ ಆನಂದ ಶೆಟ್ಟಿ, ಸಾಧನ ಪ್ರಕಾಶನ ಸಂಸ್ಥೆಯ ಅಧ್ಯಕ್ಷ ಕೆ.ರವಿಚಂದ್ರ ರಾವ್, ಬೀಚ್‌ಅಭಿವೃದ್ಧಿ ಸಮಿತಿಯ ಸಿಇಒ ಯತೀಶ್ ಬೈಕಂಪಾಡಿ ಉಪಸ್ಥಿತರಿದ್ದರು.
ಮೈಮ್ ರಾಮ್ ದಾಸ್ ಅವರಿಂದ ಕನ್ನಡ, ತುಳು ಭಾವಗೀತೆಗಳ ಗಾಯನ ಜರಗಿತು. ಈ ಕಾರ್ಯಕ್ರಮದಲ್ಲಿ ದುಬೈನಿಂದ ದಿನೇಶ್ ಬಂಗೇರ ಇರ್ವತ್ತೂರು, ಚಿತ್ರ ನಟ ಕಾಸರಗೋಡು ಚಿನ್ನ, ರಾಮಚಂದ್ರ ಬೈಕಂಪಾಡಿ, ಪತ್ರಕರ್ತ ಪೂರ್ಣಚಂದ್ರ ಪ್ರಕಾಶ್ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.