ಕಂಪ್ಯೂಟರ್ ಹಾರ್ಡವೇರ್, ನೆಟ್‌ವರ್ಕಿಂಗ್ ತರಬೇತಿ
Update: 2017-02-10 23:20 IST
ಉಡುಪಿ, ಫೆ.10: ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ರುಡ್‌ಸೆಟ್ ಸಂಸ್ಥೆ ಹೇರೂರು ಬ್ರಹ್ಮಾವರ ಇವರ ಮೂಲಕ ಹಿಂದುಳಿದ ವರ್ಗಕ್ಕೆ ಸೇರಿದ ಸವಿತಾ, ಕುಂಬಾರ, ಮಡಿವಾಳ, ಜೋಗಿ ಮತ್ತು ಗೊಲ್ಲ ಸಮುದಾಯಗಳ ನಿರುದ್ಯೋಗಿ ಯುವಕ ಯುವತಿ ಯರಿಗೆ ಒಂದು ತಿಂಗಳ ಅವಧಿಯ ಕಂಪ್ಯೂಟರ್ ಹಾರ್ಡವೇರ್ ಮತ್ತು ನೆಟ್‌ವರ್ಕಿಂಗ್ ತರಬೇತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆಸಕ್ತರು ಬಿಳಿ ಹಾಳೆಯಲ್ಲಿ ಅರ್ಜಿಯನ್ನು ಜಾತಿ, ಆದಾಯ ಪ್ರಮಾಣ ಪತ್ರ, ರೇಶನ್ ಕಾರ್ಡ್/ಆಧಾರ್‌ಕಾರ್ಡ್ ಪ್ರತಿ, 2 ಪೋಟೊದೊಂದಿಗೆ ಫೆ.28ರೊಳಗೆ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ರಜತ್ರಾದಿ, ‘ಬಿ’ ಬ್ಲಾಕ್ 2ನೇ ಮಹಡಿ ಮಣಿಪಾಲ ಇಲ್ಲಿ ಸಲಿಸಬಹುದು. ಹೆಚ್ಚಿನ ಮಾಹಿತಿಗೆ ಜಿಲ್ಲಾ ಕಚೇರಿ ಅಥವಾ ದೂರವಾಣಿ:0820-2574882ನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.