ಫೆ 11 ರಂದು ಸೂರಿಕುಮೇರುನಲ್ಲಿ ಸಂಶುಲ್ ಉಲಮಾ ಅನುಸ್ಮರಣೆ

Update: 2017-02-10 18:02 GMT

ವಿಟ್ಲ,ಫೆ.10 : ಎಸ್ಕೆಎಸ್ಸೆಸ್ಸೆಫ್ ಸೂರಿಕುಮೇರು-ಮಾಣಿ ಶಾಖೆಯ ಆಶ್ರಯದಲ್ಲಿ ಸಂಶುಲ್ ಉಲಮಾ ಹಾಗೂ ಅಗಲಿದ ಸಮಸ್ತ ನಾಯಕರ ಅನುಸ್ಮರಣೆ ಮತ್ತು ಮತ ಪ್ರವಚನ ಕಾರ್ಯಕ್ರಮವು ಫೆ 11 ರಂದು ಸೂರಿಕುಮೇರು ಎಚ್.ಪಿ. ಪೆಟ್ರೋಲ್ ಪಂಪ್ ಬಳಿಯ ಸಂಶುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ಉಪಾಧ್ಯಕ್ಷ ಹಾಜಿ ಕೆ.ಪಿ. ಅಬ್ದುಲ್ ಜಬ್ಬಾರ್ ಮುಸ್ಲಿಯಾರ್, ಸಯ್ಯಿದ್ ಮುಝಮ್ಮಿಲ್ ಅಲಿ ಶಿಹಾಬ್ ತಂಙಳ್ ಪಾಣಕ್ಕಾಡ್, ಹಾಫಿಳ್ ಇ.ಕೆ. ಅಬೂಬಕ್ಕರ್ ನಿಝಾಮಿ ಮಲೇಶ್ಯಾ, 9ರ ಹರೆಯದ ಬಾಲಕ ಹಾಫಿಳ್ ರಹ್‌ಮಾನ್ ಹಾದಿ ಮಲೇಶಿಯಾ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News