ಪ್ರೊ.ಸಿ.ಎನ್.ರಾವ್‌ರಿಗೆ ಯೆನೆಪೊಯ ವಿವಿಯಿಂದ ಡಾಕ್ಟರ್ ಆಫ್ ಸಯನ್ಸ್ ಪದವಿ
Update: 2017-02-11 13:24 IST
ಕೊಣಾಜೆ, ಫೆ.11: ಉಳ್ಳಾಲ: ಭಾರತರತ್ನ ಪ್ರೊ.ಸಿ.ಎನ್.ರಾವ್ ಶನಿವಾರ ದೇರಳಕಟ್ಟೆಯಲ್ಲಿರುವ ಯೆನೆಪೊಯ ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿದರು.
ಈ ಸಂದರ್ಭ ವಿಜ್ಞಾನ ಕ್ಷೇತ್ರಕ್ಕೆ ನೀಡಿರುವ ಅಪ್ರತಿಮ ಸೇವೆಯನ್ನು ಪರಿಗಣಿಸಿ ಅವರಿಗೆ ಯೆನೆಪೊಯ ವಿಶ್ವವಿದ್ಯಾನಿಲಯದ ವತಿಯಿಂದ ‘ಡಾಕ್ಟರ್ ಆಫ್ ಸಯನ್ಸ್’ ಎಂಬ ಪದವಿ ನೀಡಿ ಗೌರವಿಸಲಾಯಿತು.
ಯೆನಪೊಯ ಪ್ರತಿಷ್ಠಾನದ ಉಪನ್ಯಾಸ ಮಾಲಿಕೆಯನ್ನು ಉದ್ಘಾಟಿಸಿ ಅವರು ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ ಅಮಲು ಮುಕ್ತ ಸಮಾಜವನ್ನು ರೂಪಿಸುವ ನಿಟ್ಟಿನಲ್ಲಿ ಯೆನೆಪೊಯ ವಿವಿಯು ಸ್ಥಾಪಿಸಿದ ‘ಯೆನೆಪೊಯ ನರ್ಕೊಟಿಕ್ಸ್ ಎಜುಕೇಶನ್ ಫೌಂಡೇಶನ್ ಆಫ್ ಇಂಡಿಯಾ’ವನ್ನು ಲೋಕಾರ್ಪಣೆಗೊಳಿಸಿದರು.
ಕಾರ್ಯಕ್ರಮದಲ್ಲಿ ಯೆನೆಪೊಯ ವಿವಿ ಕುಲಾಧಿಪತಿ ವೈ.ಅಬ್ದುಲ್ಲಾ ಕುಂಞಿ, ಕುಲಪತಿ ಡಾ.ವಿಜಯಕುಮಾರ್, ಡಾ.ಇಂದುಮತಿ ರಾವ್, ನಸ್ರೀನ್ ಅಬ್ದುಲ್ಲಾ, ವೈ.ಮುಹಮ್ಮದ್‌ಕುಂಞಿ ಮೊದಲಾದವರು ಉಪಸ್ಥಿತರಿದ್ದರು.