ಯೆನೆಪೊಯ ವಿವಿ ಕ್ಯಾನ್ಸರ್ ಜಾಗೃತಿ ಪರಿಶೀಲನಾ ಅಭಿಯಾನ
Update: 2017-02-11 16:35 IST
ಮಂಗಳೂರು, ಫೆ.11: ಕಂಕನಾಡಿಯಲ್ಲಿರುವ ಸೈಂಟ್ ಜೋಸೆಫ್ ಪ್ರೌಢಶಾಲೆಯಲ್ಲಿ ಯೆನೆಪೊಯ ವಿಶ್ವವಿದ್ಯಾನಿಲಯದ ಕ್ಯಾನ್ಸರ್ ಜಾಗೃತಿ ಮತ್ತು ಪರಿಶೀಲನಾ ಅಭೀಯಾನವನ್ನು ಸರಕಾರಿ ಮುಖ್ಯ ಸಚೇತಕ ಐವನ್ ಡಿಸೋಜ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು, ರಿಕ್ಷಾ ಚಾಲಕರಿಗಾಗಿ ಹಮ್ಮಿಕೊಂಡಿರುವ ಈ ವೈದ್ಯಕೀಯ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಹೇಳಿದರು.
ಯೆನೆಪೊಯ ವಿಶ್ವವಿದ್ಯಾನಿಲಯದ ವೈದ್ಯ ಡಾ.ಗಣೇಶ್ ಶೆಣೈ ಮಾತನಾಡಿ, ಬೀಡಿ, ಸಿಗರೇಟು, ತಂಬಾಕು ಸೇವನೆಯಿಂದ ಕ್ಯಾನ್ಸರ್ ರೋಗ ಬರುತ್ತಿದ್ದು, ಇದನ್ನು ತಡೆಗಟ್ಟಲು ಈ ಕೆಟ್ಟ ಚಟಗಳನ್ನು ಬಿಡಬೇಕು ಎಂದರು.
ಸಮಾರಂಭದಲ್ಲಿ ಡಾ.ಇಬ್ರಾಹೀಂ ಬಾಷಾ, ಡಾ.ರಚನಾ ಪ್ರಭು, ಆಟೋರಿಕ್ಷಾ ಚಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಶೇಖರ್ ದೇರಳಕಟ್ಟೆ, ನವೀನ್ ದೇವಾಡಿಗ ಸಿರಿಲ್ ಡಿಸೋಜ, ಗಣೇಶ್ ಉಲ್ಲಾಳ, ನಾಗೇಂದ್ರ ಕುಮಾರ್, ಭಾಸ್ಕರ್ ರಾವ್, ಆನಂದ್ ರಾವ್, ಮೊಂತೆರೊ ಲೋಬೊ, ರೋಹಿಣಿ, ಮೀನಾ ಉಪಸ್ಥಿತರಿದ್ದರು.
ವಸಂತ್ ಶೆಟ್ಟಿ ಸ್ವಾಗತಿಸಿ, ವಂದಿಸಿದರು.