ಸವಣೂರಿನಲ್ಲಿ ರಾಷ್ಟ್ರೀಯ ಯುವಸಪ್ತಾಹ
ಪುತ್ತೂರು,ಫೆ.10: ಯುವಶಕ್ತಿ ದೇಶದ ಭವಿಷ್ಯವಾಗಿದ್ದು, ಯುವಶಕ್ತಿ ಒಂದಾದರೆ ದೇಶದಲ್ಲಿ ರಚನಾತ್ಮಕ ಬದಲಾವಣೆ ಸಾಧ್ಯ. ಯುವಜನತೆ ಸಂಘಟಿತರಾಗಿ ಸಮಾಜಮುಖಿ ಕಾರ್ಯಗಳಿಗೆ ಮುಂದಾಗುವ ಮೂಲಕ ಉತ್ತಮ ಕಾರ್ಯ ಮಾಡುವುದು ದೇಶದ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸುತ್ತದೆ ಎಂದು ಸವಣೂರು ಹಿಂದೂ ಜಾಗರಣ ವೇದಿಕೆಯ ಪೂರ್ವಾಧ್ಯಕ್ಷ,ಪುತ್ತೂರು ನಗರ ಘಟಕದ ಗೌರವಾಧ್ಯಕ್ಷ ಕುಂಜಾಡಿ ಪ್ರಕಾಶ್ಚಂದ್ರ ರೈ ಮುಗೇರುಗುತ್ತು ಹೇಳಿದರು.
ಅವರು ಶುಕ್ರವಾರ ರಾತ್ರಿ ರಾಜ್ಯಪ್ರಶಸ್ತಿ ಪುರಸ್ಕೃತ ಸವಣೂರು ಯುವಕ ಮಂಡಲದ ವತಿಯಿಂದ ಯುವಸಭಾಭವನದಲ್ಲಿ ನಡೆಯುತ್ತಿರುವ ‘ರಾಷ್ಟ್ರೀಯ ಯುವ ಸಪ್ತಾಹ’ವನ್ನು ಉದ್ಘಾಟಿಸಿ ಮಾತನಾಡಿದರು.
ಸವಣೂರು ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು ,ಸವಣೂರು ಪ್ರಾ.ಕೃ.ಪ.ಸ.ಸಂ.ದ ಅಧ್ಯಕ್ಷ ಉದಯ ರೈ ಮಾದೋಡಿ ,ವಿಜಯ ಬ್ಯಾಂಕ್‌ನ ನಿವೃತ ಪ್ರಭಂದಕ ಪಿ.ಡಿ.ಕೃಷ್ಣ ಕುಮಾರ್ ರೈ ದೇವಸ್ಯ ಮಾತನಾಡಿದರು.
ಇದೇ ಸಂಧರ್ಭದಲ್ಲಿ ಯುವಕ ಮಂಡಲಕ್ಕೆ ಭಾಷಣ ಪೀಠವನ್ನು ಕೊಡುಗೆಯಾಗಿ ನೀಡಿದ ತಾಲೂಕು ಮಾಹಿತಿ ಹಕ್ಕು ಹೋರಾಟಗಾರರ ಸಂಘದ ಕಾರ್ಯದರ್ಶಿ ಬಾಲಚಂದ್ರ ಸೊರಕೆ ಅವರನ್ನು ಯುವಕ ಮಂಡಲದ ವತಿಯಿಂದ ಗೌರವಿಸಲಾಯಿತು.
ಯುವಕ ಮಂಡಲದ ಮಾರ್ಗದರ್ಶಕ ಗಿರಿಶಂಕರ್ ಸುಲಾಯ ,ಮಾಜಿ ಅಧ್ಯಕ್ಷರಾದ ಸುಪ್ರಿತ್ ರೈ ಖಂಡಿಗ,ಪ್ರಜ್ವಲ್ ಕೆ.ಆರ್,ತಾರಾನಾಥ ಕಾಯರ್ಗ,ಮಹೇಶ್ ಕೆ.ಸವಣೂರು ,ಸತೀಶ್ ಬಲ್ಯಾಯ ,ಕುಲಪ್ರಕಾಶ್ ಮೆದು ,ದಯಾನಂದ ಮೆದು,ಕಾರ್ಯದರ್ಶಿ ಸುಬ್ರಹಣ್ಯ ಬಿ.ಎಸ್ ಅತಿಥಿಗಳನ್ನು ಗೌರವಿಸಿದರು.
ಯುವಕ ಮಂಡಲದ ಅಧ್ಯಕ್ಷ ಸಚಿನ್ ಎಸ್ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಪ್ರವೀಣ್ ಚೆನ್ನಾವರ ವಂದಿಸಿದರು.ಮಾಜಿ ಅಧ್ಯಕ್ಷ ರಾಕೇಶ್ ರೈ ಕೆಡೆಂಜಿ ಕಾರ್ಯಕ್ರಮ ನಿರೂಪಿಸಿದರು.
ಸಂಗೀತ ರಸಮಂಜರಿ ; ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕೇಶವ ಅಮೀನ್ ಸವಣೂರು ನಿರ್ಧೇಶನದಲ್ಲಿ ಶಿವ ಮೆಲೋಡಿಯಸ್ ಮಂಗಳೂರು ತಂಡದಿಂದ ಸಂಗೀತ ರಸಮಂಜರಿ ನಡೆಯಿತು.