×
Ad

ಮಣಿಪಾಲದಲ್ಲಿ ‘ವಾಕ್ ಆಫ್ ಹೋಪ್’ ನಡಿಗೆ

Update: 2017-02-11 19:50 IST

ಉಡುಪಿ, ಫೆ.11: ಮಹಿಳಾ ಉದ್ಯಮಿಗಳ ಅಭಿವೃದ್ಧಿ ವೇದಿಕೆ ‘ಪವರ್’ ವತಿಯಿಂದ ಏಕತೆ ಮತ್ತು ಪರಸ್ಪರ ಸಹಕಾರ ಮನೋಭಾವದ ಉತ್ತೇಜನ ಕ್ಕಾಗಿ ‘ವಾಕ್ ಆಫ್ ಹೋಪ್’(ಭರವಸೆಯ ನಡಿಗೆ)ಯನ್ನು ಇಂದು ಮಣಿಪಾಲದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಮಣಿಪಾಲದ ರಜತಾದ್ರಿಯಿಂದ ಮಣಿಪಾಲ ಟೈಗರ್ ಸರ್ಕಲ್‌ವರೆಗೆ ನಡೆದ ಈ ನಡಿಗೆಗೆ ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹಸಿರು ನಿಶಾನೆ ತೋರಿಸಿ ಶುಭ ಹಾರೈಸಿದರು. ಇದರಲ್ಲಿ ವಿವಿಧ ಕ್ಷೇತ್ರಗಳ ಮಹಿಳಾ ಉದ್ಯಮಿಗಳು, ರೋಟರಿ ಕ್ಲಬ್, ಲಯನ್ಸ ಕ್ಲಬ್, ಇನ್ನರ್‌ವೀಲ್, ಮಣಿಪಾಲ ಮತ್ತು ಉಡುಪಿ ಮಹಿಳಾ ಸಮಾಜ, ಕಲಾವಿದರು, ವಿದ್ಯಾರ್ಥಿನಿಯರು, ಗೃಹಿಣಿಯರು ಸೇರಿದಂತೆ ನೂರಾರು ಮಂದಿ ಮಹಿಳೆಯರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಪವರ್ ಅಧ್ಯಕ್ಷೆ ಸರಿತಾ ಸಂತೋಷ್, ರಿತು ಚಬ್ರಿಯಾ, ಸುಪ್ರಿಯಾ ಕಾಮತ್, ಪೂಜನ್ ಕಾಮತ್, ಶ್ರುತಿ ಶೆಣೈ, ಪುಷ್ಪಾ ಜಿ. ಕಾಮತ್, ನಿವೇದಿತಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News