×
Ad

ಯೇನೆಪೋಯ ಕಾಲೇಜಿನಲ್ಲಿ ವ್ಯಕ್ತಿತ್ವ ವಿಕಸನ ತರಬೇತಿ

Update: 2017-02-11 19:56 IST

ಮಂಗಳೂರು, ಫೆ. 11: ಬಲ್ಮಠದ ಯೆನೆಪೋಯ ಕಾಲೇಜಿನಲ್ಲಿ ಇತ್ತೀಚೆಗೆ ವ್ಯಕ್ತಿತ್ವ ವಿಕಸನ ತರಬೇತಿ ನಡೆಯಿತು. ಮುಖ್ಯ ಅತಿಥಿಯಾಗಿ ಮತ್ತು ತರಬೇತುದಾರರಾಗಿ ಆಗಮಿಸಿದ ಪಿ.ಎ. ಕಾಲೇಜಿನ ಎಂ.ಬಿ.ಎ. ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಸೈಯ್ಯದ್ ಅಮೀನ್ ಅಹ್ಮದ್ ಇವರು ವ್ಯಕ್ತಿತ್ವ ವಿಕಸನದ ವಿವಿಧ ವಿಷಯಗಳ ಕುರಿತು ಮಾತನಾಡಿದರು. ಆತ್ಮ ವಿಶ್ವಾಸವನ್ನು ಹೆಚ್ಚಿಸಿ ಕೊಳ್ಳುವುದು, ಏಕಾಗ್ರತೆ, ನಾಯಕತ್ವಕ್ಕೆ ಸಂಬಂಧಪಟ್ಟಂತೆ ಹಲವು ವಿಷಯಗಳನ್ನು ದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.

ಕಾಲೇಜಿನ ಪ್ರಾಚಾರ್ಯ ಡಾ.ಜೊಬಿ.ಇ.ಸಿ ಪಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕಿ ಅಝ್ವಿನ್ ಅತಿಥಿಗಳನ್ನು ಸಭೆಗೆ ಪರಿಚುಸಿದರು. ವಿದ್ಯಾರ್ಥಿನಿ ಸಮ್ರೀನ್ ಸ್ವಾಗತಿಸಿದರು. ವಿದ್ಯಾರ್ಥಿನಿ ಹರ್ಷಿಯ ವಂದಿಸಿದರು. ವಿದ್ಯಾರ್ಥಿನಿ ಉನೈಝಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News