×
Ad

ನಾವು ಏನಲ್ಲವೋ ಅದು ಆಗುವುದೇ ನಾಟಕ: ವೈದೇಹಿ

Update: 2017-02-11 20:17 IST

ಪೆರ್ಡೂರು, ಫೆ.11: ನಾವು ಏನಲ್ಲವೋ ಅದು ಆಗುವುದೇ ನಾಟಕದ ಮೂಲ ಗುಣ. ಆದ್ದರಿಂದ ಎಳೆಯರಿಂದ ದೊಡ್ಡವರವರೆಗೆ ಎಲ್ಲರಿಗೂ ನಾಟಕ ಇಷ್ಟವಾಗುತ್ತದೆ ಎಂದು ಕನ್ನಡ ಖ್ಯಾತ ಸಾಹಿತಿ ವೈದೇಹಿ ಹೇಳಿದ್ದಾರೆ.

ಪೆರ್ಡೂರು ಪ್ರೌಢಶಾಲೆಯ ಬಯಲು ರಂಗಮಂಟಪದಲ್ಲಿ ಶುಕ್ರವಾರ ಪ್ರಾರಂಭಗೊಂಡ ಮೂರು ದಿನಗಳ ‘ಅನಂತ’ ನಾಟಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ನಾಟಕ ಸಂಸ್ಕೃತಿ ನಮ್ಮ ಜೀವನದ ಅವಿಬಾಜ್ಯ ಅಂಗ. ನಮ್ಮ ಶೈಕ್ಷಣಿಕ ವ್ಯವಸ್ಥೆ ಯೊಳಗೆ ನಾಟಕ ಸಂಸ್ಕೃತಿ ಬೆಳೆಯಬೇಕಾದ ಅಗತ್ಯ ಇದೆ ಎಂದು ಅವರು ಅಭಿಪ್ರಾಯಪಟ್ಟರು.

ಪೆರ್ಡೂರು ಗ್ರಾಮಪಂಚಾಯತ್ ಅಧ್ಯಕ್ಷೆ ಶಾಂಭವಿ ಕುಲಾಲ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಲ್ಲೂರು ಫ್ಯಾಮಿಲಿ ಟ್ರಸ್ಟ್‌ನ ಶಿವರಾಮ ಶೆಟ್ಟಿ ತಲ್ಲೂರು, ಹಿರಿಯಡ್ಕ ಲಯನ್ಸ್ ಅಧ್ಯಕ್ಷ ಶಶಿಕುಮಾರ ಶೆಟ್ಟಿ, ರಂಗನಟ ಪ್ರಭಾಕರ ಕಲ್ಯಾಣಿ, ಉದ್ಯಮಿ ಕೆ. ಶಾಂತಾರಾಮ ಸೂಡ, ಶಾಲೆಯ ಮುಖ್ಯೋಪಾಧ್ಯಾಯ ಎಚ್.ಎಸ್.ಗಣೇಶ ಭಟ್ ಉಪಸ್ಥಿತರಿದ್ದರು.

ನಾಟಕೋತ್ಸವದ ಸಂಘಟಕ ಜಿ.ಪಿ.ಪ್ರಬಾಕರ ತುಮರಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಗಣೇಶ ಕುಲಾಲ ವಂದಿಸಿದರು. ಶಿಕ್ಷಕ ಸ್ಟ್ಯಾನಿ ಮಿನೇಜಸ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಹಂಗಾರಕಟ್ಟೆಯ ಬಿ.ಡಿ. ಶೆಟ್ಟಿ ಬಿಬಿಎಂ ಕಾಲೇಜಿನ ತಂಡದಿಂದ ‘ಮದುವೆ ೆಣ್ಣು’ ನಾಟಕ ಪ್ರದರ್ಶನಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News