'ಬಾರಲ್ಲೊಂದು ದಿನ' ಕಿರು ಚಿತ್ರ ಬಿಡುಗಡೆ
Update: 2017-02-11 20:39 IST
ಬೆಳ್ತಂಗಡಿ,ಫೆ.11: ಮದ್ಯಪಾನ ಹಾಗೂ ಬಾಲಕಾರ್ಮಿಕತೆಯ ವಿರುದ್ದ ಜಾಗೃತಿ ಮೂಡಿಸುವ ಉದ್ದೇಶದಿಂದ ಫಸ್ಟ್ ಟೈಮ್ ಕ್ರಿಯೇಶನ್ಸ್ ಅವರು ನಿರ್ಮಿಸಿದ ಬಾರಲ್ಲೊಂದು ದಿನ ಎಂಬ ಕಿರು ಚಿತ್ರವನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆಯವರು ಶನಿವಾರ ಧರ್ಮಸ್ಥಳದಲ್ಲಿ ಬಿಡುಗಡೆಗೊಳಿಸಿದರು.
ಈ ಕಿರು ಚಿತ್ರವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ ಡಾ ಹೆಗ್ಗಡೆಯವರು ಜನಜಾಗೃತಿ ವೇದಿಕೆಯ ಮದ್ಯವರ್ಜನ ಶಿಬಿರದಲ್ಲಿ ಈ ಚಿತ್ರದ ಪ್ರದರ್ಶನವನ್ನು ಮಾಡಲಾಗುವುದು ಎಂದರು. ಈ ಸಂದರ್ಭ ಚಿತ್ರದ ನಿರ್ದೇಶಕ ಸಚಿನ್ ಬಲ್ಯಾಯ ಪುತ್ತೂರು, ಛಾಯಾಗ್ರಾಹಕ ಸಾಗರ್ ಹೆಗ್ಡೆ ನಾರಾವಿ, ಚಿತ್ರಕಥೆ-ಸಂಭಾಷಣೆ ರಚನಕಾರ ಸುಧೀನ್ ಹೆಗ್ಡೆ, ಸಂಗೀತ ವಿನ್ಯಾಸ ನೀಡಿದ ಹರ್ಷ ಎಲ್.ಎಲ್. ಬೆಂಗಳೂರು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಿಸ್, ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ ಇದ್ದರು. ಚಿತ್ರದಲ್ಲಿ ಜೀವನ್ ರಾಂ ಸುಳ್ಯ, ಮಾ ನಹಿಗ, ಸುಧೀ್ ಹೆಗ್ಡೆ ಮತ್ತಿತರರು ನಟಿಸಿದ್ದಾರೆ.