ಬೈಕ್ ಕಳವು: ಇಬ್ಬರ ಸೆರೆ
ಮಂಗಳೂರು, ಫೆ. 11: ಕೆಲವು ದಿನಗಳ ಹಿಂದೆ ಬೈಕ್‌ವೊಂದನ್ನು ಕಳವು ಮಾಡಿ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬರ್ಕೆ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಶಿವಮೊಗ್ಗ ಜಿಲ್ಲೆ ಬೋವಿನ ಕಾಲನಿಯ ನಿವಾಸಿ ಲೋಕೇಶ (22) ಮತ್ತು ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಚೆನ್ನಳ್ಳಿಯ ಮಹಾಂತೇಶ್ (36) ಎಂದು ಗುರುಇಸಲಾಗಿದೆ.
ಬರ್ಕೆ ಠಾಣಾ ಅಪರಾಧ ವಿಭಾಗದ ಉಪ ನಿರೀಕ್ಷಕ ನರೇಂದ್ರ ಅವರು ಇಂದು ರೌಂಡ್ಸ್‌ನಲ್ಲಿದ ಸಂದರ್ಭದಲ್ಲಿ ಕುದ್ರೋಳಿಯಿಂದ ಮಣ್ಣಗುಡ್ಡೆ ಕಡೆಗೆ ಹೋಗುತ್ತಿದ್ದ ಬೈಕ್‌ನನ್ನು ನಿಲ್ಲಿಸಿದಾಗ ಅದಲ್ಲಿದ್ದ ಚಾಲಕ ಮತ್ತು ಸವಾಹ ಬೈಕ್ ಬಿಟ್ಟು ಓಡಲು ಯತ್ನಿಸಿದ್ದಾರೆ. ಅವರನ್ನು ಸಿಬ್ಬಂದಿ ಹಿಂಬಾಲಿಸಿ ವಿಚಾರಿಸಿದಾಗ ಇದೇ ತಿಂಳ 4ರಂದು ಕೊಡಿಯಾಲ್‌ಬೈಲ್‌ನ ಕಲಾಕುಂಜದ ಬಳಿಯಿಂದ ಬೈಕ್‌ನ್ನು ಕಳವುಗೈದಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳವುಗೈಯಲಾದ ಈ ಬೈಕ್ ಪ್ರದೀಪ ಎಂಬವರಿಗೆ ಸೇರಿದ್ದಾಗಿದೆ. ಬೈಕ್, ಇಬ್ಬರು ಆರೋಪಿಗಳು ಹಾಗೂ ಅವರ ಬಳಿಯಿಂದ 3 ಮೊಬೈಲ್ ಫೋನ್ ಸಹಿತ ಒಟ್ಟು 50,500 ರೂ. ವೌಲ್ಯದ ಸೊತ್ತನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.