×
Ad

ಮದುವೆ ಮನೆಯಿಂದ ಚಿನ್ನಾಭರಣ ಕದ್ದ ಆರೋಪಿ ಸೆರೆ

Update: 2017-02-11 22:27 IST

ಕಾಸರಗೋಡು,ಫೆ.11 : ವಿವಾಹ ಸಿದ್ಧತೆಯಲ್ಲಿದ್ದ ಮನೆಯಿಂದ 13 ಪವನ್ ಚಿನ್ನಾಭರಣ ಕಳವು ಸೇರಿದಂತೆ ಎಂಟಕ್ಕೂ ಅಧಿಕ ಪ್ರಕರಣಗಳ ಆರೋಪಿಯೋರ್ವನನ್ನು  ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು  ಮುಳ್ಳೇರಿಯದ ಅಶೋಕ್ ( 38) ಎಂದು ಗುರುತಿಸಲಾಗಿದೆ.ಈತನ ಇಬ್ಬರು ಸಹಚರರಿಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕಳೆದ  ಜನವರಿ  31 ರಂದು  ಕಳವು ನಡೆದಿತ್ತು.  ಬಾರಡ್ಕದ  ಶರತ್  ಎಂಬವರ ಮನೆಗೆ ನುಗ್ಗಿ 12 ಪವನ್ ಚಿನ್ನಾಭರಣ ಕಳವು ಮಾಡಲಾಗಿತ್ತು. ಮಾರ್ಚ್ ನಲ್ಲಿ  ಮಗಳ ವಿಹಾಹಕ್ಕೆ ಚಿನ್ನಾಭರಣವನ್ನು  ಖರೀದಿಸಿ ಇಡಲಾಗಿತ್ತು.

ಮನೆಯವರು ಸಂಜೆ 7 ಗಂಟೆಗೆ  ಮನೆಗೆ ಬೀಗ ಹಾಕಿ  ಬದಿಯಡ್ಕ ಪೇಟೆಗೆ ತೆರಳಿದ್ದರು.   ಮರಳಿ ಬಂದಾಗ ಕೃತ್ಯ ಬೆಳಕಿಗೆ ಬಂದಿತ್ತು.

ಮನೆಯ ಬೀಗ ಮುರಿದು ಒಳನುಗ್ಗಿದ ಕಳ್ಳರು ಈ ಕೃತ್ಯ ನಡೆಸಲಾಗಿತ್ತು. ಈ ಬಗ್ಗೆ ಲಭಿಸಿದ ದೂರಿನಂತೆ  ಪ್ರಕರಣ ದಾಖಲಿಸಿಕೊಂಡ ಪೊಲೀಸರು ಓರ್ವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಬಕಾರಿ , ಕಳವು ಸೇರಿದಂತೆ ಹತ್ತಕ್ಕೂ ಅಧಿಕ ಪ್ರಕರಣಗಳು ಈತನ ಮೇಲೆ ಇರುವುದಾಗಿ ಪೊಲೀಸರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News