ದಕ್ಷಿಣ ಭಾರತ ಸಾಂಸ್ಕೃತಿಕೋತ್ಸವಕ್ಕೆ ಅದ್ದೂರಿ ತೆರೆ

Update: 2017-02-11 18:11 GMT

 ಕಾಸರಗೋಡು, ೆ.11: ಕಾಸರಗೋಡು ನಗರ ಸಭಾ ಸಭಾಂಗಣದಲ್ಲಿ ಮೂರು ದಿನಗಳ ಕಾಲ ನಡೆದ ದಕ್ಷಿಣ ಭಾರತ ಸಾಂಸ್ಕೃತಿಕೋತ್ಸವ ಶನಿವಾರ ಸಂಜೆ ಸಮಾಪನಗೊಂಡಿತು.

 ಸಮಾರೋಪ ಸಮಾರಂಭವನ್ನು ಕೇರಳ ರಾಜ್ಯ ಗ್ರಂಥಾಲಯ ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯ ಆರ್.ಉನ್ನಿಕೃಷ್ಣ ಪಿಳ್ಳೆ ಉದ್ಘಾಟಿಸಿದರು.

 ವಾಸು ಚೆರೋಡ್ ಅಧ್ಯಕ್ಷತೆ ವಹಿಸಿದ್ದರು. ಕೆ.ಎಂ.ಅಬ್ದುಲ್ ರಹ್ಮಾನ್, ಉಮೇಶ್ ಸಾಲ್ಯಾನ್, ಟಿ.ಕೆ.ರಾಜನ್, ಪಿ.ಜಿ. ನಾಗರಾಜ್, ರಮೇಶ್ ಮೈಸೂರು, ಪಿ.ಅಪ್ಪುಕುಟ್ಟನ್, ರವೀಂದ್ರನ್ ರಾವಣೇಶ್ವರ, ಸಿ.ಎಲ್.ಹಮೀದ್, ಎನ್.ಎಸ್. ವಿನೋದ್ ಮತ್ತಿತರರು ಮಾತನಾಡಿದರು. ಸಭಾ ಕಾರ್ಯಕ್ರಮದ ಬಳಿಕ ಬೆನಕ ಬೆಂಗಳೂರು ತಂಡ ದಿಂದ ‘ಗೋಕುಲ ನಿರ್ಗಮನ’ ಕನ್ನಡ ನಾಟಕ ಪ್ರದರ್ಶನ ಗೊಂಡಿತು. ಉಸ್ತಾದ್ ಹಸನ್ ಭಾಯ್ ತಂಡದಿಂದ ಸಂಗೀತ ಕಚೇರಿ ನಡೆಯಿತು. ‘ಓದುಗರ ರಾಷ್ಟ್ರೀಯ’ ವಿಚಾರ ಗೋಷ್ಠಿಯನ್ನು ಸಂಸದ ಪಿ. ಕರುಣಾಕರನ್‌ಉದ್ಘಾಟಿಸಿದರು.

  ಡಾ.ಕೆ.ಎಸ್.ರವಿಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವೈಶಾಖನ್, ಎಸ್.ರಮೇಶ್, ಅಗ್ರಹಾರ ಕೃಷ್ಣ ಮೂರ್ತಿ, ಡಾ.ಖದೀಜಾ ಮುಮ್ತಾಝ್, ಡಾ. ಎ.ಎಂ.ಶ್ರೀಧರನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News