×
Ad

ಜನ ಸಾಮಾನ್ಯರ ಬೇಡಿಕೆ ಈಡೇರಿಸದೇ ಟೋಲ್ ಸಂಗ್ರಹಕ್ಕೆ ಸಿಐಟಿಯು ವಿರೋಧ

Update: 2017-02-11 23:44 IST

ಉಡುಪಿ, ೆ.11: ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಪೂರ್ಣಗೊಳಿಸದೇ ಟೋಲ್ ಸಂಗ್ರಹ ಮಾಡುವುದು ಸರಿಯಲ್ಲ. ಹಿಂದೆ ಈ ಬೇಡಿಕೆಗೆ ಜಿಲ್ಲಾ ಆಡಳಿತದ ಒಪ್ಪಿಗೆ ಇತ್ತು, ಆದರೆ ಇತ್ತೀಚೆಗೆ ಹಠಾತ್ತನೆ ಟೋಲ್ ಸಂಗ್ರಹ ಮಾಡಲು ಮುಂದಾ ಗಿರುವುದು ತೀರಾ ಅನ್ಯಾಯ ಹಾಗೂ ಜನ ವಿರೋ ಕ್ರಮವಾಗಿದೆ ಎಂದು ಸಿಐಟಿಯು ಜಿಲ್ಲಾ ಸಮಿತಿ ಅಭಿಪ್ರಾಯ ಪಟ್ಟಿದೆ.

ಜಿಲ್ಲಾಡಳಿತ ಜನವಿರೋ ಹಾಗೂ ಕಾರ್ಮಿಕ ವಿರೋ ನೀತಿಯನ್ನು ಕೈಬಿಟ್ಟು, ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಪೂರ್ಣಮಾಡಿ ನ್ಯಾಯವಾದ ದರ ನಿಗದಿ ಮಾಡಿ ಟೋಲ್ ಸಂಗ್ರಹಕ್ಕೆ ಮುಂದಾಗಬೇಕೆಂದು ಸಿಐಟಿಯು ಜಿಲ್ಲಾ ಸಮಿತಿಯ ಅಧ್ಯಕ್ಷ ಪಿ.ವಿಶ್ವನಾಥ ರೈ ಒತ್ತಾಯಿಸಿದ್ದಾರೆ. ಟೋಲ್ ಸಂಗ್ರಹಕ್ಕೆ ವಿರುದ್ಧವಾಗಿ ೆ.13ರ ಸೋಮವಾರ ನಡೆಯುವ ಜಿಲ್ಲಾ ಬಂದ್‌ನ್ನು ಸಿಐಟಿಯು ಬೆಂಬಲಿಸುತ್ತದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News