ಜವುಳಿ ಅಂಗಡಿಯಲ್ಲಿ ಕಳವು
Update: 2017-02-11 23:45 IST
ಉಪ್ಪಿನಂಗಡಿ, ೆ.11: ಗ್ರಾಹಕನ ಸೋಗಿನಲ್ಲಿ ಜವುಳಿ ಅಂಗಡಿಗೆ ಬಂದ ವ್ಯಕ್ತಿಯೊಬ್ಬ ವಸ ಕಳವುಗೈದ ಪ್ರಕರಣ ಉಪ್ಪಿನಂಗಡಿಯಲ್ಲಿ ನಡೆದಿದೆ. ಇಲ್ಲಿನ ಪೊಲೀಸ್ ಠಾಣಾ ಮುಂಭಾಗದ ‘ನಿಹಾ ಡ್ರೆಸ್ಸಸ್’ ಎಂಬ ಜವುಳಿ ಅಂಗಡಿಗೆ ಬಂದ 60ರ ಆಸುಪಾಸಿನ ವ್ಯಕ್ತಿಯೋರ್ವ ತನಗೆ ನೈಟಿ ಬೇಕೆಂದು ತಿಳಿಸಿ ದ್ದಾನೆನ್ನಲಾಗಿದೆ.
ಬಳಿಕ ಬಿಲ್ ಮಾಡಿಸುವ ನೆಪದಲ್ಲಿ ಸೇಲ್ಸ್‌ಗರ್ಲ್ಸ್ ಗಮನ ಬೇರೆಡೆಗೆ ಕೇಂದ್ರೀಕರಿಸುವಂತೆ ಮಾಡಿ, ಅಂಗಡಿಯೊಳಗಿದ್ದ ಇತರ ಬಟ್ಟೆಗಳನ್ನು ತಾನು ಧರಿಸಿದ್ದ ಲುಂಗಿಯೊಳಗೆ ತುರುಕಿಸಿ, ತನ್ನಲ್ಲಿ ಪೂರ್ತಿ ಹಣವಿಲ್ಲ ಈಗ ತರುತ್ತೇನೆಂದು ಹೇಳಿ ಪಲಾಯನಗೈದಿದ್ದಾನೆ ಎನ್ನಲಾಗಿದೆ. ಸ್ವಲ್ಪ ಸಮಯದ ನಂತರ ಅಂಗಡಿ ಮಾಲಕ ಬಂದು ಸಿಸಿ ಕ್ಯಾಮರಾವನ್ನು ಪರಿ ಶೀಲಿಸಿದಾಗಲೇ ಬಿಲ್ ಮಾಡಿ ಹೋದ ಗ್ರಾಹಕ ಇತರ ಬಟ್ಟೆಯನ್ನೂ ಕದ್ದೊಯ್ದ ವಿಚಾರ ತಿಳಿದು ಬಂದಿದೆ. ಬಳಿಕ ಬಹಳಷ್ಟು ಹುಡುಕಾಟ ನಡೆಸಿದರೂ ಆತ ಪತ್ತೆ ಯಾಗಲಿಲ್ಲ.