ಹೆಸರು ಡಿಲಿಟ್ ಆದವರಿಗೆ ಮತದಾನಕ್ಕೆ ಅವಕಾಶ

Update: 2017-02-11 18:17 GMT

ಉಳ್ಳಾಲ, ೆ.11: ಉಳ್ಳಾಲ ನಗರಸಭೆಯಲ್ಲಿ ತೆರವುಗೊಂಡ ಎರಡು ಸ್ಥಾನಗಳಿಗೆ ೆ.12ರಂದು ಉಪಚುನಾವಣೆ ನಡೆಯಲಿದೆ. ಎರಡೂ ವಾರ್ಡ್‌ಗಳಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರನ್ನು ದಿಢೀರನೆ ಅಳಿಸಿ ಹಾಕಿದ ಗೊಂದಲ ವನ್ನು ಸಹಾಯಕ ಕಮಿಷನರ್ ಒಪ್ಪಿಕೊಂಡಿದ್ದು, ಕೊನೆಗೂ ಹೆಸರು ಡಿಲಿಟ್ ಆದವರಿಗೆ ಮತದಾನಕ್ಕೆ ಅವಕಾಶ ಒದಗಿಸಿದ್ದಾರೆ. ನಗರ ವ್ಯಾಪ್ತಿಯ 24 ಮತ್ತು 26ನೆ ವಾರ್ಡ್‌ಗೆ ನಡೆಯಲಿರುವ ಉಪಚುನಾವಣೆಗೆ ಅಖಾಡ ಸಿದ್ಧವಾಗಿದ್ದು, ಚುನಾವಣೆ ಯಲ್ಲಿ ಸ್ಪರ್ಸುತ್ತಿರುವ ಎಲ್ಲ ಅಭ್ಯರ್ಥಿಗಳು ಗೆಲುವಿಗಾಗಿ ಸಾಕಷ್ಟು ಪ್ರಚಾರ ನಡೆಸಿದ್ದಾರೆ. ಈ ಮಧ್ಯೆ ಗುರುವಾರ ಸುಮಾರು ಮುನ್ನೂರಕ್ಕೂ ಅಕ ಹೆಸರು ಮತದಾರರ ಪಟ್ಟಿಯಿಂದ ನಾಪತ್ತೆಯಾಗಿದ್ದವು. ಈ ಕುರಿತು ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿ, ಜಿಲ್ಲಾಕಾರಿ, ಚುನಾವಣಾಕಾರಿಗೆ ದೂರು ನೀಡಿದ್ದರು. ಶುಕ್ರವಾರ ಸಹಾಯಕ ಕಮಿಷನರ್ ರೇಣುಕಾ ಪ್ರಸಾದ್ ನಗರದ ಎರಡೂ ವಾರ್ಡ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಶನಿವಾರದಂದು ಸಹಾಯಕ ಕಮಿಷನರ್ ಅಕಾರಿಗಳಿಂದ ಉಂಟಾದ ಗೊಂದಲವನ್ನು ಒಪ್ಪಿಕೊಂಡಿದ್ದು, ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು ಅಳಿಸಿ ಹಾಕಿದ ಕ್ರಮವನ್ನು ಅಮಾನ್ಯಗೊಳಿಸಿ 2017 ಜ.1ರ ಪರಿಷ್ಕೃತ ಮತದಾರರ ಪಟ್ಟಿಯನ್ವಯವೇ ಆ ಪಟ್ಟಿಯಲ್ಲಿರುವ ಎಲ್ಲ ಹೆಸರುಗಳಿಗೂ ಮತದಾನ ನಡೆಸುವ ಹಕ್ಕನ್ನು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News