ಸಹಪ್ರಯಾಣಿಕನ ತಲೆಕತ್ತರಿಸಿ ಕೊಂದ ವ್ಯಕ್ತಿಯ ಖುಲಾಸೆ
ಒಟ್ಟವಾ, ಫೆ.12: ಕೆನಡದಲ್ಲಿ ಬಸ್‌ವೊಂದರಲ್ಲಿ ಸಹಪ್ರಯಾಣಿಕನ ಕೊರಳು ಕತ್ತರಿಸಿ ಕೊಂದ ಪ್ರಕರಣದಲ್ಲಿ ವಿಲ್ ಬೆಕರ್ ಎಂಬಾತನನ್ನು ಖುಲಾಸೆಗೊಳಿಸಲಾಗಿದೆ. ಬೆಕರ್ ಮಾನಸಿಕ ಅಸ್ವಸ್ಥ ಎಂದು ಸಾಬೀತಾಗಿದ್ದರಿಂದ ಆತನಿಗೆ ಶಿಕ್ಷೆ ಮಾಫಿ ನೀಡಲಾಗಿದೆ. ಬೆಕರ್ ಮಾನಸಿಕರೋಗಿಯಾದ್ದರಿಂದ ಅಪರಾಧ ಕೃತ್ಯವನ್ನು ಈತನ ಮೇಲೆ ಹೊರಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಬೆಕರ್ ವೈದ್ಯರ ನಿಗಾದಲ್ಲಿರುವ ವ್ಯಕ್ತಿ. ಮಾನಸಿಕ ಅಸ್ವಸ್ಥ. ಈತ ಎಲ್ಲ ರೀತಿಯ ನಿರೀಕ್ಷಣೆಗಳಿಂದ ಮುಕ್ತ ಎಂದು ಮಾನಿಟೊಬೊ ಕ್ರಿಮಿನಲ್ ಕೋಡ್ ರಿವ್ಯೆ ಬೋರ್ಡ್ ತಿಳಿಸಿದೆ.
ಆದರೆ ಬೆಕರ್ ಸರಿಯಾಗಿ ಔಷಧ ತೆಗೆದುಕೊಳ್ಳುತ್ತಿದ್ದಾನೆಂದ ದೃಢವಾಗಿ ಹೇಳಲು ಸಾಧ್ಯವಿಲ್ಲ ಎಂದು ಬೆಕರ್‌ನ ತಾಯಿ ಕರೋಲ್ ಡಿ. ಡೆಲ್ಲಿ ಹೇಳಿದ್ದರು. 2008ರಲ್ಲಿ ಕೊಲೆಕೃತ್ಯ ನಡೆದಿತ್ತು. ಬಸ್‌ನಲ್ಲಿ ಪ್ರಯಾಣಿಸುವಾಗ ಸಹ ಪ್ರಯಾಣಿಕ ಟಿಂ ಮೆಕ್ಲಿನ್ ಎನ್ನುವ ಅಪರಿಚಿತ ವ್ಯಕ್ತಿಯನ್ನು ಯಾವುದೇ ಕಾರಣವಿಲ್ಲದೆ ಬೆಕರ್ ಕೊಂದು ಹಾಕಿದ್ದ. 2001ರಲ್ಲಿ ಚೀನದಿಂದ ಕೆನಡಕ್ಕೆ ಬೆಕರ್‌ನ ಕುಟುಂಬ ವಲಸೆ ಬಂದಿತ್ತು ಎಂದು ವರದಿ ತಿಳಿಸಿದೆ.