ತಲಪಾಡಿ: ಟೋಲ್ ಗೇಟ್ ವಿರುದ್ಧ ಮುಂದುವರಿದ ಪ್ರತಿಭಟನೆ
Update: 2017-02-12 12:36 IST
ಮಂಗಳೂರು, ಫೆ.12: ರಾಷ್ಟ್ರೀಯ ಹೆದ್ದಾರಿ 66ರ ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಟೋಲ್ ಸಂಗ್ರಹಿಸುವುದನ್ನು ಖಂಡಿಸಿ ಡಿವೈಎಫ್‌ಐ ಉಳ್ಳಾಲ ಮತ್ತು ಮಂಜೇಶ್ವರ ವಲಯ ಹಾಗೂ ಎಐವೈಎಫ್ ಮಂಜೇಶ್ವರ ವಲಯವು ಜಂಟಿಯಾಗಿ ‘ಎಲ್‌ಡಿವೈಎಫ್’ ವೇದಿಕೆಯ ಅಧೀನದಲ್ಲಿ ರವಿವಾರ ತಲಪಾಡಿಯಲ್ಲಿ ಪ್ರತಿಭಟನೆ ನಡೆಸಿತು.
ಕಾಮಗಾರಿ ಪೂರ್ಣಗೊಂಡ ಬಳಿಕವೇ ಟೋಲ್ ಸಂಗ್ರಹಿಸಬೇಕು. ನೋಂದಣಿ ಸಂಖ್ಯೆ ಕೆಎಲ್ 14 ಮತ್ತು ಕೆಎ 19ರ ವಾಹನಗಳಿಗೆ ಟೋಲ್ ವಿನಾಯಿತಿ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
‘ಎಲ್‌ಡಿವೈಎಫ್’ ಸಂಘಟನೆಯ ಮುಖಂಡರಾದ ಮಣಿಕಂಠನ್, ಕೆ.ಆರ್.ಜಯಾನಂದ, ಕೃಷ್ಣಪ್ಪ ಸಾಲ್ಯಾನ್, ಬಿ.ಕೆ.ಇಮ್ತಿಯಾಝ್,ದಿವಾಕರ ಮಾಡ, ಸುನೀಲ್ ತೇವುಲ, ಪ್ರಶಾಂತ್ ಕನಿಲ, ಸಾದಿಕ್ ಮೊದಲಾದವರು ಪಾಲ್ಗೊಂಡಿದ್ದರು.