ಎಂಬಿಎ ಪರೀಕ್ಷೆ : ಮುಕ್ಕ ಶ್ರೀನಿವಾಸ್ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್‌ಗೆ ಮೂರು ರ‍್ಯಾಂಕ್
Update: 2017-02-12 17:43 IST
ಮಂಗಳೂರು, ಫೆ.12: ಮಂಗಳೂರು ವಿಶ್ವವಿದ್ಯಾನಿಲಯವು ನಡೆಸಿದ ಎಂಬಿಎ ಪದವಿ ಪರೀಕ್ಷೆಯಲ್ಲಿ ಮುಕ್ಕ ಶ್ರೀನಿವಾಸ್ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್‌ಗೆ ಮೂರು ರ‍್ಯಾಂಕ್ ಲಭಿಸಿದೆ.
ಎಂಬಿಎ ವಿದ್ಯಾರ್ಥಿನಿಯರಾದ ಅಪೂರ್ವಾ ರಾವ್ (2ನೆ), ದೀಕ್ಷಿತಾ ಕೋಟ್ಯಾನ್ (3ನೆ), ಸಾತ್ವಿಕಾ ಆಚಾರ್ಯ (4ನೆ) ರ‍್ಯಾಂಕ್ ಪಡೆದಿದ್ದು, ಕ್ರಮವಾಗಿ ಶೇ.80, ಶೇ.78.31 ಮತ್ತು ಶೇ.77.65 ಅಂಕಗಳನ್ನು ಗಳಿಸಿರುತ್ತಾರೆ.
ಮಂಗಳೂರು ವಿಶ್ವವಿದ್ಯಾಲಯವು ನಡೆಸಿದ ಎಂಬಿಎ ಪದವಿ ಪರೀಕ್ಷೆಯಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಕ್ರಮವಾಗಿ 2ನೆ, 3ನೆ ಮತ್ತು 4ನೆ ರ‍್ಯಾಂಕ್ಗಳನ್ನು ಒಂದೇ ಕಾಲೇಜಿನ ವಿದ್ಯಾರ್ಥಿಗಳು ಗಳಿಸಿರುವುದು ವಿಶೇಷ ಎಂದು ಪ್ರಕಟನೆ ತಿಳಿಸಿದೆ.