‘ಇರಾ ಕಬಡ್ಡಿ-2017’ ಉದ್ಘಾಟನೆ
ಮಂಗಳೂರು, ಫೆ. 12: ಇರಾ ಭಾರತ್ ಫ್ರೆಂಡ್ಸ್ ಕ್ಲಬ್ ಆಶ್ರಯದಲ್ಲಿ ಬೆಳ್ಳಿಪ್ಪಾಡಿಗುತ್ತು ದಿ. ಕೃಷ್ಣಪ್ರಸಾದ್ ರೈ ಬಾವಬೀಡು ಇವರ ಸ್ಮರಣಾರ್ಥ, ಕರ್ನಾಟಕ ರಾಜ್ಯ ಕಬಡ್ಡಿ ಅಮೆಚೂರು ಸಂಸ್ಥೆ, ಜಿಲ್ಲಾ ಅಮೆಚೂರು ಹಾಗೂ ಬಂಟ್ವಾಳ ತಾಲೂಕು ಅಮೆಚೂರು ಸಂಸ್ಥೆಯ ಜಂಟಿ ಸಹಯೋಗದೊಂದಿಗೆ ಸಂಪೂರ್ಣ ಪ್ರೊ ಕಬಡ್ಡಿ ಮಾದರಿಯ ರಾಜ್ಯಮಟ್ಟದ ಹಗಲು-ರಾತ್ರಿ ‘ಇರಾ ಕಬಡ್ಡಿ-2017’ ರವಿವಾರ ಇರಾ ಬಾವಬೀಡು ಗದ್ದೆಯಲ್ಲಿ ಉದ್ಘಾಟನೆಗೊಂಡಿತು.
ಅಮರ್ ಇನ್‌ಫ್ರಾ ಪ್ರಾಜೆಕ್ಟ್ ಮಂಗಳೂರು ಇದರ ಅನಿಲ್ ಶೆಟ್ಟಿ ಪಂದ್ಯಾಟವನ್ನು ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಬಂಟ್ವಾಳ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ಕಬಡ್ಡಿ ಜಾನಪದ ಕ್ರೀಡೆಯಾಗಿದ್ದು, ಇದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರಯತ್ನ ಅತೀ ಅಗತ್ಯ ಎಂದರು.
ಯಜಮಾನ ಇಂಡಸ್ಟ್ರಿಯ ಆಡಳಿತ ಪಾಲುದಾರ ಟಿ.ವರದರಾಜ ಪೈ, ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರಾಧ್ಯಕ್ಷ ಸಂತೋಷ್‌ಕುಮಾರ್ ರೈ ಬೋಳಿಯಾರು, ಪ್ರಮುಖರಾದ ವೇಣುಗೋಪಾಲ ಭಂಡಾರಿ ಬಾವಬೀಡು, ಡಾ. ಕಿಶಾನ್ ಶೆಟ್ಟಿ, ಬಾವಬೀಡು ಸುಜಾತ ಕೃಷ್ಣಪ್ರಸಾದ್ ರೈ, ಪ್ರಮುಖರಾದ ಡಾ. ಸುಭೋದ್ ಭಂಡಾರಿ, ರಂಗನಾಥ್ ಶೆಟ್ಟಿ, ಜಗದೀಶ ಶೆಟ್ಟಿ ಇರಾಗುತ್ತು, ಯತಿರಾಜ ಶೆಟ್ಟಿ ಸಂಪಿಲ, ದೇವದಾಸ ಅಡಪ, ಗೋಪಾಲ ಅಶ್ವತ್ಥಡಿ, ಡಾ. ಹಾಜಿ ಮುನೀರ್ ಬಾವಾ, ಭಾರತ್ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಕಿಶೋರ್ ಪೂಜಾರಿ ಇರಾ ಉಪಸ್ಥಿತರಿದ್ದರು.
ರಿತೇಶ್ ಸ್ವಾಗತಿಸಿದರು. ಸುದೇಶ್ ಭಂಡಾರಿ ವಂದಿಸಿದರು. ದಿನೇಶ್ ಇರಾ ಕಾರ್ಯಕ್ರಮ ನಿರೂಪಿಸಿದರು.