ಹಿಂಸಾತ್ಮಕ ಪ್ರತಿಭಟನೆಗೂ ಸಿದ್ಧ: ಸುರೇಶ್ ಆಳ್ವ
ಮಂಗಳೂರು, ಫೆ.12: ಸ್ಥಳೀಯ ಐದು ಕಿ.ಮೀ. ವ್ಯಾಪ್ತಿಯ ನಾಗರಿಕರ ಖಾಸಗಿ ವಾಹನಗಳಿಗೆ ಫೆ.25ರವರೆಗೆ ಉಚಿತ ಪ್ರಯಾಣ ಎಂದು ಕಂಪೆನಿ ತಿಳಿಸುವ ಮೂಲಕ ಜನರ ಕಣ್ಣಿಗೆ ಮಣ್ಣೆರಚಿದೆ. ಈವರೆಗೆ ನಾವು ತಲಪಾಡಿ ಸುತ್ತಮುತ್ತಲಿನವರಿಗೆ ಸುಂಕ ವಿನಾಯಿತಿ ಕೇಳಿದ್ದೆವು. ಈಗ ಪಂಪ್‌ವೆಲ್‌ನಿಂದ ತಲಪಾಡಿವರೆಗೆ ಸುಂಕ ವಿನಾಯಿತಿಯ ಬೇಡಿಕೆ ನಮ್ಮದಾಗಿದೆ. ಈ ಬೇಡಿಕೆ ಈಡೇರದಿದ್ದಲ್ಲಿ ಮುಂದೆ ಹಿಂಸಾತ್ಮಕ ಪ್ರತಿಭಟನೆಗೂ ಬದ್ಧ ತಲಪಾಡಿ ಗ್ರಾಪಂ ಅಧ್ಯಕ್ಷ ಸುರೇಶ್ ಆಳ್ವ ಎಂದು ಎಚ್ಚರಿಸಿದರು.
ನಾಗರಿಕ ಹಿತರಕ್ಷಣಾ ವೇದಿಕೆ ಆಶ್ರಯದಲ್ಲಿ ರವಿವಾರ ನಡೆದ ಪ್ರತಿಭಟನಾಕಾರರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಜಿಪಂ ಮಾಜಿ ಸದಸ್ಯ ವಿನಯ ನಾಯ್ಕ, ತುಳುನಾಡು ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪಿನಮೊಗರು, ಕೋಟೆಕಾರ್ ಪಟ್ಟಣ ಪಂಚಾಯತ್ ಅಧ್ಯಕ್ಷ ಉದಯ್ ಶೆಟ್ಟಿ ಸುಳ್ಳೆಂಜೇರು, ಸ್ಥಳೀಯರಾದ ಫಾರೂಕ್,ವಾಣಿ ಇನ್ನಿತರರು ಉಪಸ್ಥಿತರಿದ್ದರು.
ತಲಪಾಡಿಯ ಟೋಲ್‌ಗೇಟ್ ವಿರುದ್ಧ ಕಾಂಗ್ರೆಸ್ ಬೆಂಬಲಿತ ಸಂಘಟನೆಗಳು ಪ್ರತಿಭಟನೆ ನಿಲ್ಲಿಸಿದ್ದರೂ ರವಿವಾರ ಎಡಪಕ್ಷ ಬೆಂಬಲಿತ ಸಂಘಟನೆಗಳು ಹಾಗೂ ತಲಪಾಡಿ ನಾಗರಿಕ ಹಿತರಕ್ಷಣಾ ವೇದಿಕೆ ಆಶ್ರಯದಲ್ಲಿ ಎರಡೂ ಕಡೆ ಏಕಕಾಲಕ್ಕೆ ಪ್ರತಿಭಟನೆ ನಡೆಸಿ ಗಮನ ಸೆಳೆಯಿತು.