×
Ad

ಬದಿಯಡ್ಕ: ಜನಪರ ಸಮಿತಿಯ ಅನಿರ್ಧಿಷ್ಟಾವಧಿ ಮುಷ್ಕರ ನಾಲ್ಕನೇ ದಿನಕ್ಕೆ

Update: 2017-02-12 18:27 IST

ಬದಿಯಡ್ಕ,ಫೆ.12: ಚೆರ್ಕಳ - ಕಲ್ಲಡ್ಕ, ಬದಿಯಡ್ಕ-ಏತಡ್ಕ-ಸುಳ್ಳ್ಯಪದವು, ಮುಳ್ಳೇರಿಯ-ಆರ್ಲಪದವು ಮೊದಲಾದ ರಸ್ತೆಗಳ ಶೋಚನೀಯಾವಸ್ಥೆಯನ್ನು ಪರಿಹರಿಸಬೇಕೆಂದು ಜನಪರ ಸಮಿತಿಯ ಹೂಡುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ನಾಲ್ಕನೇ ದಿನಕ್ಕೆ ಕಾಲಿಡಿತ್ತಿದೆ.

ಮೂರನೇ ದಿನವಾದ ಆದಿತ್ಯವಾರ ಮುಷ್ಕರವು ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ನೇತೃತ್ವದಲ್ಲಿ ನಡೆಯಿತು. ಈಲ್ಲಾ ಉಪಾಧ್ಯಕ್ಷ ಎಸ್.ಎನ್. ಮಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಷ್ಕರ ಸಮಿತಿ ಚೆಯರ್‌ಮೇನ್ ಮಾಹಿನ್ ಕೇಲೋಟ್ ಅಧ್ಯಕ್ಷತೆ ವಹಿಸಿದರು.

ಕೆ.ವಿ.ವಿ.ಯಸ್. ಬದಿಯಡ್ಕ ಘಟಕದ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಹಾಜಿ ಕುಂಚಾರು, ವ್ಯಾಪಾರಿ ವೆಲ್‌ಫೇರ್ ಸೊಸೈಟಿ ಕಾರ್ಯದರ್ಶಿ ಜ್ಞಾನದೇವ ಶೆಣೈ, ವ್ಯಾಪಾರಿ ಯೂತ್ ವಿಂಗ್ ಅಧ್ಯಕ್ಷ ಗಣೇಶ ಸಿ.ಯಚ್, ಸದಸ್ಯರಾದ ಪಚ್ಚಕರಿ ಹಂಸ, ನಾರಾಯಣ ವಿದ್ಯಾಗಿರಿ, ರಾಜು ಸ್ಟೀಫನ್, ಶ್ರೀಕುಮಾರ್, ಮಹಮ್ಮದ್ ಬೋಂಬೈ, ಬಶೀರ್ ಫ್ರೆಂಡ್ಸ್, ಶಂಸುದ್ಧೀನ್ ಕಿನ್ನಿಂಗಾರ್, ಭಾಸ್ಕರನ್ ಬದಿಯಡ್ಕ, ನೌಷಾದ್ ಮಾರ್ಪನಡ್ಕ, ಸಿಜು ಥೋಮಸ್, ಲತೀಫ್ ವಿದ್ಯಾಗಿರಿ, ಸಾಹಿತಿ ಕೇಳು ಮಾಸ್ತರ್ ಅಗಲ್ಪಾಡಿ, ತುಳುವರ ಆಯನೋದ ನಿರಂಜನ ರೈ, ರಜಾಕ್ ಚೆರ್ಲಡ್ಕ, ಬಿ.ಟಿ ಅಬ್ದುಲ್ಲ ಮೊದಲಾದವರು ಮಾತನಾಡಿದರು.

ಮುಷ್ಕರದ ನಾಲ್ಕನೇ ದಿನವಾದ ಸೋಮವಾರದಿಂದ ಪ್ರತಿಭಟನೆಯನ್ನು ಶಕ್ತವಾಗಿಸಲು ತೀರ್ಮಾನಿಸಲಾಯಿತು. ಸಂಬಂಧಿಸಿದ ಅಧಿಕಾರಿಗಳು ಮುಷ್ಕರಕ್ಕೆ ಸ್ಪಂಧಿಸದಿದ್ದರೆ ಪ್ರತಿಭಟನೆಯ ಮುಂದುವರಿಕೆಯಾಗಿ ಪಿ.ಡಬ್ಲ್ಯು.ಡಿ. ಮುತ್ತ್ತಿಗೆ, ರಸ್ತೆ ತಡೆ, ರಸ್ತೆ - ಅಸಿಸ್ಟೆಂಡ್ ಇಂಚಿನೀಯರ್ ಕಛೇರಿ ಮುತ್ತಿಗೆ, ಹರತಾಳ, ನಿರಾಹಾರ ಮುಷ್ಕರ ಮೊದಲಾದವುಗಳನ್ನು ಹಮ್ಮಿಕೊಳ್ಳಲಾಗುವುದೆಂದು ಮುಷ್ಕರ ಸಮಿತಿ ಪದಾಧಿಕಾರಿಗಳು ತೋರಿಸಿದರು. ಮುಷ್ಕರ ಸಮಿತಿ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿ ಕೋ-ಓರ್ಡಿನೇಟರ್ ಅಶ್ರಫ್ ಮುನಿಯೂರ್ ಧನ್ಯವಾದ ಇತ್ತರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News