ತ್ವಲಬಾ ವಿಂಗ್ ಅಲ್-ಅಝೀಮಾ ಶಿಬಿರ ಸಮಾಪ್ತಿ

Update: 2017-02-12 13:21 GMT

ಮಂಗಳೂರು, ಫೆ.12: ಎಸ್ಕೆಎಸ್ಸೆಸ್ಸೆಫ್ ತ್ವಲಬಾ ವಿಂಗ್ ದ.ಕ ಜಿಲ್ಲಾ ಸಮಿತಿಯು ಶಂಸುಲ್ ಉಲಮಾ ಅರಬಿಕ್ ಕಾಲೇಜು ತೋಡಾರಿನಲ್ಲಿ ಹಮ್ಮಿಕೊಂಡ ಅಲ್ ಅಝೀಮಾ ದ್ವಿದಿನ ಅಧ್ಯಯನ ಶಿಬಿರವು ಶನಿವಾರ ಸಮಾಪ್ತಿಗೊಂಡಿತು.

ತೋಡಾರು ದರ್ಗಾ ಝಿಯಾರತ್‌ನೊಂದಿಗೆ ಶಿಬಿರಕ್ಕೆ ಚಾಲನೆ ನೀಡಲಾಯಿತು. ತೋಡಾರು ಶಂಸುಲ್ ಉಲಮಾ ಅರಬಿಕ್ ಕಾಲೇಜಿನ ಸ್ಥಾಪಕಾಧ್ಯಕ್ಷ ಕೆ. ಎಂ. ಉಸ್ಮಾನುಲ್ ಫೈಝಿ ಧ್ವಜಾರೋಹಣಗೈದರು. ಎಸ್ಕೆಎಸ್ಸೆಸ್ಸೆಫ್ ದ.ಕ. ಜಿಲ್ಲಾಧ್ಯಕ್ಷ ಇಸ್ಹಾಕ್ ಫೈಝಿ ಕಾರ್ಯಕ್ರಮ ಉದ್ಘಾಟಿಸಿದರು.

ಬಳಿಕ ನಡೆದ ವಿವಿಧ ಅಧ್ಯಯನ ತರಗತಿಗಳಲ್ಲಿ ಮುಹಮ್ಮದ್ ರಾಫಿ ವಯನಾಡ್ ‘ಸಮೂಹದೆಡೆಯಲ್ಲಿ ನಿಮ್ಮ ಅಸ್ತಿತ್ವವನ್ನು ಗುರುತಿಸಿ’ ಎಂಬ ವಿಷಯದಲ್ಲಿ ತರಗತಿ ನಡೆಸಿದರು. ತ್ವಲಬಾ ವಿಂಗ್ ಕೇಂದ್ರ ಸಮಿತಿ ನಾಯಕರಾದ ಬಾಶಿತ್ ಹುದವಿ ತಿರೂರ್ ಮತ್ತು ಉವೈಸ್ ಪಡಿಯಂಗರ ‘ತ್ವಲಬಾ ವಿಂಗ್ ಕರ್ಮರೀತಿ ಮತ್ತು ವ್ಯಾಪ್ತಿ’ ಎಂಬುದರ ಕುರಿತು ವಿಷಯ ಮಂಡಿಸಿದರು. ಶಿಹಾಬುದ್ಧೀನ್ ಬಾಖವಿ ಕಾಂಞಗಾಡ್ ‘ಆತ್ಮ ಸಂಸ್ಕರಣೆ’ ಹಾಗು ‘ಸಮಸ್ತ ಸ್ವಾತಿಕರ ಸರಣಿ’ ಎಂಬ ವಿಷಯದಲ್ಲಿ ತರಗತಿ ನಡೆಸಿದರು. ‘ವಾರ್ತಾಭಾರತಿ’ ದೈನಿಕದ ಬ್ಯೂರೊ ಮುಖ್ಯಸ್ಥ ಪುಷ್ಪರಾಜ್ ಬಿ.ಎನ್. ‘ಮಾಧ್ಯಮ ಮತ್ತು ಬರಹ’ ಎಂಬ ವಿಷಯದಲ್ಲಿ ತರಗತಿ ನೀಡಿದರು.

ತ್ವಲಬಾ ವಿಂಗ್ ಜಿಲ್ಲಾ ಸಮಿತಿ ನಾಯಕರಾದ ಅಹ್ಮದ್ ನಈಮ್ ಮುಕ್ವೆ, ಶಫೀಕ್ ವಾದಿತ್ವೈಬ, ಇಸ್ಮಾಯೀಲ್ ಫರಂಗಿಪೇಟೆ, ಸ್ವಾದಿಕ್ ಬಜೆಗುಂಡಿ, ಸಫ್ವಾನ್ ಮಾಪಲ್ ವಿವಿಧ ತರಗತಿಗಳನ್ನು ನಿರೂಪಿಸಿದರು.

 ಎಸ್ಕೆಎಸ್ಸೆಸ್ಸೆಫ್ ಜಿಲ್ಲಾ ನಾಯಕರಾದ ಇಸ್ಮಾಯೀಲ್ ಯಮಾನಿ , ಸಿದ್ಧೀಕ್ ಅಬ್ದುಲ್ ಖಾದರ್, ಬಂಟ್ವಾಳ ತ್ವಲಬಾ ವಿಂಗ್ ರಾಜ್ಯ ಪ್ರತಿನಿಧಿ ರಿಯಾಝ್ ಪಟ್ಟೆ, ಶಂಸುಲ್ ಉಲಮಾ ಅರಬಿಕ್ ಕಾಲೇಜು ತೋಡಾರು ಇದರ ವರ್ಕಿಂಗ್ ಕಾರ್ಯದರ್ಶಿ ಇಸಾಕ್ ಹಾಜಿ ತೋಡಾರು, ಉಪಪ್ರಾಂಶುಪಾಲ ಮುಫ್ತಿ ರಫೀಕ್, ಅಹ್ಮದ್ ಹುದವಿ, ನಿಝಾಮಿ ಕೋಲಾರಿ ಸಹಿತ ಕಾಲೇಜಿನ ಪ್ರಾಧ್ಯಾಪಕರು ಮತ್ತು ಆಡಳಿತ ಸಮಿತಿಯ ಸದಸ್ಯರು, ಎಸ್ಕೆಎಸ್ಸೆಸ್ಸೆಫ್‌ನ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News