ಕಿನ್ನಿಗೋಳಿ : ವಾರ್ಷಿಕ ಜಾತ್ರಾ ಮಹೋತ್ಸವ ಕಾರ್ಯಕ್ರಮ ಉದ್ಘಾಟನೆ

Update: 2017-02-12 13:47 GMT

ಕಿನ್ನಿಗೋಳಿ, ಫೆ. 12: ಕರಾವಳಿಯ ದೇವಾಲಯಗಳು ತುಂಬಾ ಸುಂದರ ಹಾಗೂ ದೈವಿಕ ಶಕ್ತಿಯುಳ್ಳದು ಎಂಬುದು ಸತ್ಯವಾಗಿದೆ ಕಟೀಲು, ಮುಂಡ್ಕೂರು, ಏಳಿಂಜೆ ದೇವಸ್ಥಾನಗಳ ಶಕ್ತಿ ಕೇಂದ್ರಗಳಾಗಿವೆ ಎಂದು ಮುಂಬಯಿಯ ಚಿತ್ರನಟ ನಾನಾಪಾಟೇಕರ್ ಹೇಳಿದರು.

ಅವರು ಫೆ. 12 ರಂದು ಕಿನ್ನಿಗೋಳಿ ಸಮೀಪದ ಏಳಿಂಜೆ ಲಕ್ಷೀಜನಾರ್ದನ ಮಹಾಗಣಪತಿ ದೇವಸ್ಥಾನದಲ್ಲಿ ನಡೆಯಲಿರುವ ವಾರ್ಷಿಕ ಜಾತ್ರಾ ಮಹೋತ್ಸವ ಕಾರ್ಯಕ್ರಮ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ದೇವಳದ ತಂತ್ರಿಗಳಾದ ಶಿಬರೂರು ವೇದವ್ಯಾಸ ತಂತ್ರಿ, ಅನುವಂಶಿಕ ಅರ್ಚಕರಾದ ವೈ. ಗಣೇಶ್ ಭಟ್, ದೇವಸ್ಥಾನದ ಆಡಳಿತ ಮೊಕ್ತೇಸರ ಕೋಂಜಾಲಗುತ್ತು ಪ್ರಭಾಕರ ಶೆಟ್ಟಿ, , ಅಂಗಡಿ ಗುತ್ತು ಗುತ್ತಿನಾರ್ ಬಾಲಕೃಷ್ಣ ಶೆಟ್ಟ್ಟಿ, ಏಳಿಂಜೆ ಜಾರಂದಾಯ ದೈವಸ್ಥಾನದ ಆಡಳಿತ ಮುಕ್ತೇಸರ ಸದಾನಂದ ಶೆಟ್ಟಿ ಭಂಡಸಾಲೆ, ಸುಧಾಕರ ಶೆಟ್ಟಿ ಮುಂಡ್ಕೂರು ಮುಲ್ಲಡ್ಕ , ಜಾರಂದಾಯ ದೈವಸ್ಥಾನ ಪಟ್ಟೆ ಆಡಳಿತ ಮುಕ್ತೇಸರ ರಘರಾಮ ಅಡ್ಯಂತಾಯ, ಅನಿಲ್ ಶೆಟ್ಟಿ ಕೋಂಜಾಲಗುತ್ತು, ಭುವನಾಭಿರಾಮ ಉಡುಪ, ಸದಾನಂದ ಭಟ್, ವೈ. ಕಷ್ಣ ಸಾಲಿಯಾನ್, ಸುಧಾಕರ ಶೆಟ್ಟಿ , ಭಾಸ್ಕರ ಶೆಟ್ಟಿ , ಯೋಗೀಶ್ ರಾವ್, ಶರತ್ ಶೆಟ್ಟಿ ಮತ್ತು ಸಾಯಿನಾಥ ಶೆಟ್ಟಿ, ಲಕ್ಷಣ್ ಬಿ.ಬಿ, ಸುಧಾಕರ ಸಾಲ್ಯಾನ್ , ವೈ ಕೃಷ್ಣ ಮೂಲ್ಯ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News