ನಗರಸಭೆ ಉಪಚುನಾವಣೆ: 6 ಕ್ಷೇತ್ರಗಳಲ್ಲಿ ಶೇ. 65.66 ಮತದಾನ

Update: 2017-02-12 13:57 GMT

ಪುತ್ತೂರು,ಫೆ.12: ಪುತ್ತೂರು ನಗರಸಭೆಯ 6 ವಾರ್ಡ್‌ಗಳಿಗೆ ನಡೆದ ಉಪಚುನಾವಣೆಯಲ್ಲಿ ಒಟ್ಟು ಶೇ. 65.66 ಮತದಾನವಾಗಿದೆ. ಚುನಾವಣೆ ನಡೆದ 6ವಾರ್ಡ್‌ಗಳಲ್ಲಿ 4832 ಮಹಿಳೆ ಮತ್ತು 4760 ಪುರುಷರು ಸೇರಿದಂತೆ ಒಟ್ಟು 9592 ಮತದಾರರಿದ್ದು, ಈ ಪೈಕಿ 3263 ಮಹಿಳೆಯರು ಮತ್ತು 3035ಪುರುಷರು ಸೇರಿದಂತೆ ಒಟ್ಟು 6298 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

6 ನೇ ವಾರ್ಡ್‌ನ ವ್ಯಾಪ್ತಿಯಲ್ಲಿ 1009 ಪುರುಷರು, 1041 ಮಹಿಳೆಯರು ಸೇರಿದಂತೆ ಒಟ್ಟು 2050 ಮತದಾರಿದ್ದು, ಈ ಪೈಕಿ 775 ಮಹಿಳೆಯರು 722 ಪುರುಷರು ಸೇರಿದಂತೆ ಒಟ್ಟು 1497 ಮತದಾರರು ಹಕ್ಕು ಚಲಾಯಿಸಿದರು. ಈ ಕೇಂದ್ರದಲ್ಲಿ ಒಟ್ಟು ಶೇ. 73.02 ಮತದಾನವಾಗಿದೆ. ಕೆಮ್ಮಾಯಿ ಕೃಷ್ಣನಗರ ಶಾಲಾ ಹಳೆಕಟ್ಟಡದಲ್ಲಿ ಮತಗಟ್ಟೆ 9 ರಲ್ಲಿ ಮತ್ತು ಕೆಮ್ಮಾಯಿ ಕೃಷ್ಣನಗರ ಶಾಲಾ ಹೊಸ ಕಟ್ಟಡದಲ್ಲಿ ಮತಗಟ್ಟೆ ಸಂಖ್ಯೆ 10 ರಲ್ಲಿ ಮತದಾನ ಪ್ರಕ್ರಿಯೆ ನಡೆಯಿತು.

 16 ನೇ ವಾರ್ಡ್ ವ್ಯಾಪ್ತಿಯಲ್ಲಿ 882 ಪುರುಷರು ಮತ್ತು 882 ಮಹಿಳಾ ಮತದಾರರು ಸೇರಿದಂತೆ ಒಟ್ಟು 1764 ಮಂದಿ ಮತದಾರರಿದ್ದು, ಈ ಪೈಕಿ 504 ಮಹಿಳೆಯರು 497 ಪುರುಷರು ಸೇರಿದಂತೆ ಒಟ್ಟು 10001 ಮತದಾನ ಮಾಡಿದರು. ಇಲ್ಲಿ ಶೇ. 56.75 ಮತದಾನವಾಗಿದೆ. ಪುರಸಭಾ ಸಮುದಾಯ ಭವನದ ಮತಗಟ್ಟೆ ಸಂಖ್ಯೆ 26 ಮತ್ತು ನಗರಸಭಾ ಕಚೇರಿ ಕಟ್ಟಡ ಮತಗಟ್ಟೆ ಸಂಖ್ಯೆ 27 ರಲ್ಲಿ ಮತದಾನ ನಡೆಯಿತು.

19 ನೇ ವಾರ್ಡ್ ವ್ಯಾಪ್ತಿಯಲ್ಲಿ 744 ಪುರುಷರು ಮತ್ತು 676 ಮಹಿಳೆಯರು ಸೇರಿದಂತೆ ಒಟ್ಟು 1420 ಮತದಾರರಿದ್ದು, ಈ ಪೈಕಿ 445 ಪುರುಷರು 435 ಮಹಿಳೆಯರು ಸೇರಿದಂತೆ ಒಟ್ಟು 880 ಮಂದಿ ಹಕ್ಕು ಚಲಾಯಿಸಿದರು. ಇಲ್ಲಿ ಶೇ. 61.97ಮತದಾನವಾಗಿದೆ. ಮುಕ್ರಂಪಾಡಿ ಅಂಗನವಾಡಿ ಕೇಂದ್ರದಲ್ಲಿನ ಮತಗಟ್ಟೆ 31 ರಲ್ಲಿ ಮತದಾನ ನಡೆಯಿತು.

21 ನೇ ವಾರ್ಡ್ ವ್ಯಾಪ್ತಿಯಲ್ಲಿ 770 ಪುರುಷರು ಮತ್ತು 836 ಮಹಿಳೆಯರು ಸೇರಿದಂತೆ ಒಟ್ಟು 1606 ಮತದಾರರಿದ್ದು, ಈ ಪೈಕಿ 488 ಪುರುಷರು 547 ಮಹಿಳೆಯರು ಸೇರಿದಂತೆ ಒಟ್ಟು 1035 ಮತದಾರರು ಹಕ್ಕು ಚಲಾಯಿಸಿದ್ದಾರೆ. ಶೇ.64.45 ಮತದಾನವಾಗಿದೆ. ಸಾಮೆತ್ತಡ್ಕ ಹಿ.ಪ್ರಾ.ಶಾಲಾ ಪೂರ್ವ ಮತಗಟ್ಟೆ 33 ಮತ್ತು ಪಶ್ಚಿಮ ಮತಗಟ್ಟೆ 34 ರಲ್ಲಿ ಮತದಾನ ಪ್ರಕ್ರಿಯೆ ನಡೆಯಿತು.

 22 ನೇ ವಾರ್ಡ್ ವ್ಯಾಪ್ತಿಯಲ್ಲಿ 484 ಪುರುಷರು, 525 ಮಹಿಳೆಯರು ಸೇರಿದಂತೆ ಒಟ್ಟು 1009 ಮತದಾರರಿದ್ದು, ಈ ಪೈಕಿ 294 ಪುರುಷರು 353 ಮಹಿಳೆಯರು ಸೇರಿದಂತೆ ಒಟ್ಟು 647 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಶೇ.64.12 ಮತದಾನವಾಗಿದೆ. ಮತಗಟ್ಟೆ ಸಂಖ್ಯೆ 35 ರ ಸೈಂಟ್ ಫಿಲೋಮಿನಾ ಕಾಲೇಜಿನ ಮತಗಟ್ಟೆಯಲ್ಲಿ ಮತದಾನ ನಡೆಯಿತು.

  26 ನೇ ವಾರ್ಡ್ ವ್ಯಾಪ್ತಿಯಲ್ಲಿ 871 ಪುರುಷ ಮತ್ತು 872 ಮಹಿಳೆಯರು ಸೇರಿದಂತೆ ಒಟ್ಟು 1743 ಮತದಾರರಿದ್ದು, ಈ ಪೈಕಿ 598 ಪುರುಷರು 649 ಮಹಿಳೆಯರು ಸೇರಿದಂತೆ ಒಟ್ಟು 1238 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಶೇ. 71.03 ಮತದಾನವಾಗಿದೆ. ಮತಗಟ್ಟೆ ಸಂಖ್ಯೆ 40 ರಲ್ಲಿ ಮತದಾನ ಪ್ರಕ್ರಿಯೆ ನಡೆಯಿತು.

ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯ ತನಕ ಮತದಾನವಾಗಿತ್ತು. ಬಳಿಕ ಎಲ್ಲಾ ಮತಪೆಟ್ಟಿಗೆಳನ್ನು ತಾಲೂಕು ಕಚೇರಿಯಲ್ಲಿ ಡಿಮಸ್ಟರಿಂಗ್ ನಡೆಸಿ ಉಪಖಜಾನೆಯ ಭದ್ರತಾ ಕೊಠಡಿಯಲ್ಲಿ ಇರಿಸಲಾಗಿದೆ. ಫೆ. 15ರಂದು ಮತ ಎಣಿಕೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News