×
Ad

ಪ್ರಸನ್ನ ಪ್ರಭುಗೆ ಸನ್ಮಾನ

Update: 2017-02-12 19:35 IST

ಭಟ್ಕಳ,ಫೆ.12: ಮಂಗಳೂರಿನಲ್ಲಿ ಜರುಗುತ್ತಿರುವ ಕೊಂಕಣಿ ಲೋಕೋತ್ಸವ ಕಾರ್ಯಕ್ರಮದಲ್ಲಿ ಯುವಜನರ ದಿನಾಚರಣೆಯ ನಿಮಿತ್ತ ಭಟ್ಕಳದ ಯುವ ಪ್ರತಿಭೆ ಝೇಂಕಾರ್ ಕಲಾ ಸಂಘದ ಪ್ರಸನ್ನ ಪ್ರಭು ಅರನ್ನು ಸನ್ಮಾನಿಸಿ ಗೌರವಿಸಲಾಯಿತು.

 ಇದಕ್ಕೂ ಪೂರ್ವ ಬಲ್ಮಟ್ಟಾದಿಂದ ಪುರಭವನದವರೆಗೆ ಅಕಾಡೆಮಿಯ ಅಧ್ಯಕ್ಷ ರೋಯ್ ಕ್ಯಾಸ್ತೆಲಿನೊ, ರಿಜಿಸ್ಟಾರ್ ದೇವದಾಸ ಪೈ, ಬಹುಭಾಷಾ ನಟಿ ಕು.ಎಸ್ತರ್ ನೊರೊನ್ಹಾ, ಕೊಂಕಣಿ ನಟ ಎಲ್ಟನ್ ಮುಂತಾದವರನ್ನೊಳಗೊಂಡು ಭವ್ಯ ಮೆರವಣಿಗೆಯಲ್ಲಿ ಸನ್ಮಾನಿತರನ್ನು ುರಭವನಕ್ಕೆ ಕರೆತರಲಾಯಿತು.

ಸಭಾ ವೇದಿಕೆಯಲ್ಲಿ ನೆರೆದ ಗಣ್ಯರ ಉಪಸ್ಥಿತಿಯಲ್ಲಿ ಸಚಿವರಾದ ಯು. ಟಿ. ಖಾದರ್ ಂುುವ ಸಾಧಕರಿಗೆ ಸನ್ಮಾನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News