×
Ad

ಅರ್ನಾಲ್ಡ್ ಬಾಕೆ ಮರು ಅಧ್ಯಯನದ ಅವಲೋಕನ

Update: 2017-02-12 20:35 IST

ಉಡುಪಿ, ಫೆ.12: ಉಡುಪಿ ಪ್ರಾಚ್ಯಸಂಚಯ ಸಂಶೋಧನ ಕೇಂದ್ರ ಮತ್ತು ಶಾರದಾ ರೆಸಿಡೆನ್ಸಿಯಲ್ ಸ್ಕೂಲ್‌ನ ಜಂಟಿ ಆಶ್ರಯದಲ್ಲಿ ಡಚ್ ವಿದ್ವಾಂಸ ಅರ್ನಾಲ್ಡ್ ಬಾಕೆ 1938 ಮರುಅಧ್ಯಯನ ದೃಶ್ಯ ಮುದ್ರಿಕೆಗಳ ಅವಲೋಕನ ಕಾರ್ಯಕ್ರಮವನ್ನು ಶಾರದಾ ಸ್ಕೂಲ್‌ನ ಗೀತಾಂಜಲಿ ಸಭಾಂಗಣದಲ್ಲಿ ರವಿವಾರ ಆಯೋಜಿಸಲಾಗಿತ್ತು.

ಅಮೆರಿಕದ ಸಂಶೋಧಕಿ ಡಾ.ಅಮಿ ಕ್ಯಾಟಲಿನ್ ಜೈರಾಜ್ ಬಾಯ್ ಶಿಖರೋಪನ್ಯಾಸ ಮಾಡಿ, ಅರ್ನಾಲ್ಡ್ ಬಾಕೆ 1934ರ ದಶಕದಲ್ಲಿ ಭಾರತದ ಉದ್ದಗಲಕ್ಕೂ ಸಂಚರಿಸಿ ಹಿಂದೂ, ಮುಸ್ಲಿಮ್, ಜೈನ, ಪಾರಸಿ, ಕ್ರಿಶ್ಚಿಯನ್, ಬುಡಕಟ್ಟು ಜನರ ಹಲವು ಮಾಹಿತಿಗಳನ್ನು ವೌಖಿಕ ಸಾಹಿತ್ಯ, ವಾದ್ಯ ಉಪ ಕರಣಗಳ ಪರಿಚಯವನ್ನು ಹಾಗೂ ಅವುಗಳ ಇತಿಹಾಸದ ಬಗ್ಗೆ ಅಧ್ಯಯನ ನಡೆಸಿದರು. ಆದುದರಿಂದ ಅವರ ಅಧ್ಯಯನದ ಕುರಿತು ನಿರಂತರ ಮರು ಅಧ್ಯಯನ ನಡೆಸಬೇಕಾದ ಅಗತ್ಯವಿದೆ ಎಂದರು.

ಕೇಂದ್ರದ ಸಂಸ್ಥಾಪಕ ನಿರ್ದೇಶಕ ಎಸ್.ಎ.ಕೃಷ್ಣಯ್ಯ ಬರೆದ ಕರ್ನಾಟಕ ಜಾನಪದಕ್ಕೆ ಅರ್ನಾಲ್ಡ್ ಬಾಕೆ ಕೊಡುಗೆಗಳ ಕುರಿತ ಕೃತಿ ಬಿಡುಗಡೆಗೊಳಿಸ ಲಾಯಿತು. ಡಾ.ಅಮಿ ಕ್ಯಾಟಲಿನ್ ಅವರಿಗೆ ಪ್ರಾಚ್ಯಶ್ರೀ ಪ್ರಶಸ್ತಿ ಮತ್ತು ಹಲ್ಲರೆ ಗೊಂಬೆಗಳು ಮರು ಅಧ್ಯಯನ ಸಂಘಟಕ ಭಾಗವತ ಶಿವಬುದ್ದಿ ಹಲ್ಲರೆ ಅವರಿಗೆ ಪ್ರಾಚ್ಯ ಪ್ರತಿಕಂಠಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮಣಿಪಾಲ ವಿವಿಯ ಗಾಂಧಿ ಅಧ್ಯಯನ ಪೀಠದ ನಿರ್ದೇಶಕ ಡಾ.ವರ ದೇಶ ಹಿರೇಗಂಗೆ, ಉಡುಪಿ ತುಳುಕೂಟದ ಗೌರವಾಧ್ಯಕ್ಷ ಡಾ.ಭಾಸ್ಕರಾನಂದ ಕುಮಾರ್, ಭಾಷಾ ತಜ್ಞ ಡಾ.ಯು.ಪಿ.ಉಪಾಧ್ಯಾಯ, ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆ ಜಾನಕಿ ಬ್ರಹ್ಮಾವರ ಮಾತನಾಡಿದರು. ಎಸ್.ಎ. ಕೃಷ್ಣಯ್ಯ ಸ್ವಾಗತಿಸಿದರು. ಉಪನ್ಯಾಸಕರಾದ ಪ್ರೊ.ವಿ.ಕೆ.ಯಾದವ್ ಕಾರ್ಯ ಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News