×
Ad

ಬಿಜೆಪಿ ಹೈ ಕಮಾಂಡಿಗೆ ಚೆಕ್ ಮೂಲಕ ಹಣ ಪಾವತಿಯಾಗುತ್ತದೆ : ಕುಮಾರ ಸ್ವಾಮಿ ಆರೋಪ

Update: 2017-02-12 20:46 IST

ಮಂಗಳೂರು,ಫೆ.12:ಬಿ.ಜೆ.ಪಿ ಪಕ್ಷದ ಹೈ ಕಮಾಂಡಿಗೆ ಚೆಕ್ ಮೂಲಕ ರಾಜ್ಯದ ಹಣ ಪಾವತಿಯಾಗುತ್ತಿದೆ ಎನ್ನುವ ವಿಷಯವನ್ನು ಮುಚ್ಚಿಟ್ಟು ಬಿಜೆಪಿಯ ಮುಖಂಡ ಯಡಿಯೂರಪ್ಪ ಕಾಂಗ್ರೆಸ್ ಸಿ.ಎಂ ಮೂಲಕ ಹೈ ಕಮಾಂಡಿಗೆ ಕಪ್ಪ ಕಾಣಿಕೆ ಸಲ್ಲಿಕೆಯಾಗುತ್ತಿದೆ ಎಂದು ಆರೋಪ ಮಾಡುತ್ತಿದ್ದಾರೆ.ಎರಡೂ ಪಕ್ಷಗಳೂ ಒಂದೇ ರೀತಿಯ ಧೋರಣೆಯನ್ನು ಹೊಂದಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರ ಸ್ವಾಮಿ ಆರೋಪಿಸಿದ್ದಾರೆ.

 ನಗರದಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ಅವರು ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

    ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ರಾಜ್ಯದಲ್ಲಿ 131 ಕ್ಕೂ ಹೆಚ್ಚಿನ ಸ್ಥಾನಗಳಲ್ಲಿ ಜಯಗಳಿಸಿ ಪ್ರಬಲ ಪ್ರಾದೇಶಿಕ ಪಕ್ಷವಾಗಿ ಮೂಡಿ ಬರಲಿದೆ.ಹೈ ಕಮಾಂಡ್‌ಗಳಿಗೆ ಕಪ್ಪ ಕಾಣಿಕೆ ನೀಡುವ ಸಂಸ್ಕೃತಿಯನ್ನು ಸಂಪೂರ್ಣ ನಿಲ್ಲಿಸಲು ಬದ್ಧ ವಾಗಿದೆ ಎಂದು ಕುಮಾರ ಸ್ವಾಮಿ ತಿಳಿಸಿದರು.

 ಸುದ್ದಿ ಗೊಷ್ಠಿಯಲ್ಲಿ ಜಿಡಿಎಸ್ ಜಿಲ್ಲಾಧ್ಯಕ್ಷ ವಿಟ್ಲ ಮುಹಮ್ಮದ್ ಕುಂಞ,ಮಾಜಿ ಸಚಿವ ಅಮರನಾಥ ಶೆಟ್ಟಿ,ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಬಿ.ಎಂ.ಫಾರೂಕ್,ಹಾಗೂ ಇತರ ಜೆಡಿಎಸ್ ಮುಖಂಡರಾದ ಹೈದರ್ ಪರ್ತಿಪ್ಪಾಡಿ,ಎಂ.ಬಿ.ಸದಾಶಿವ ,ಯೋಗೀಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News