×
Ad

ಕೃಷ್ಣಾಪುರ: ವಾರ್ಷಿಕ ರಿಫಾಯಿಯ್ಯಾ ದಫ್ ರಾತೀಬ್ ನ ಪ್ರಯುಕ್ತ ಸಾಮೂಹಿಕ ವಿವಾಹ

Update: 2017-02-12 21:05 IST

ಕೃಷ್ಣಾಪುರ,ಫೆ.12: ಲಜಿನತುಲ್ ಅನ್ಸಾರಿಯ್ಯಾ ಯಂಗ್ ಮೆನ್ಸ್ ಅಸೋಸಿಯೇಷನ್ ಕೃಷ್ಣಾಪುರ ಇದರ 21ನೆ ವಾರ್ಷಿಕೋತ್ಸವ ಮತ್ತು 16ನೇ ವಾರ್ಷಿಕ ರಿಫಾಯಿಯ್ಯಾ ದಫ್ ರಾತೀಬ್ ನ ಪ್ರಯುಕ್ತ ಸಾಮೂಹಿಕ ವಿವಾಹ ರವಿವಾರ ಕೃಷ್ಣಾಪುರ ಈದ್ಗಾ ಮೈದಾನದಲ್ಲಿ ನಡೆಯಿತು.

ಸಮಾರಂಭ ಉದ್ಘಾಟಿಸಿ ಮಾತನಾಡಿದ ಕೃಷ್ಣಾಪುರ ಬಿಜೆಎಂ ನ ಖತೀಬ್ ಉಮರುಲ್ ಫಾರೂಕ್ ಸಖಾಫಿ, ಯುವ ಸಮೂಹ ದುಷ್ಚಟಗಳ ದಾಸರಾಗುತ್ತಾ ಕಾಲಕಳೆಯುತ್ತಿದ್ದಾರೆ. ಒಬ್ಬ ಮುಸ್ಲಿಂ ಆನತ ಜೀವನಕ್ಕೆ ಬೇಕಾದದ್ದನ್ನು ಬಯಸುವುದನ್ನು ಪ್ರತಿಯೊಬ್ಬರೂ ಹೊಂದಬೇಕು ಎನ್ನುವ ಮನೋಭಾವನೆ ಹೊಂದಿದವ ಮಾತ್ರ ಯತಾರ್ಥ ಮುಸ್ಲಿಮನಾಗಲು ಸಾಧ್ಯ ಎಂದರು.

ಮುಖ್ಯ ಪ್ರಭಾಷಣ ಗೈದ ಸೈಯ್ಯದ್ ಶರಫುದ್ದೀನ್ ಅಲ್ ಹೈದ್ರೋಸಿ ತಂಞಳ್ ಎಮ್ಮೆಮಾಡ್ ಮಾತನಾಡಿ, ಹೆಸರು, ಸ್ಥಾನ ಮಾನಗಳನ್ನು ಬದಿಗೊತ್ತಿ ಸಮಾಜ ಸೇವೆಯಲ್ಲಿ ತೊಡಗಬೇಕೆಂದು ಭೋದಿಸಿದ ಧರ್ಮವಾಗಿದೆ ಇಸ್ಲಾಂ. ಅದನ್ನು ದಿಕ್ಕರಿಸಿ ನಡೆದರೆ ಆತ ಮುಸ್ಲಿಮನಾಗಿರಲು ಯೋಗ್ಯನಲ್ಲ ಎಂದರು.
ದುಷ್ಚಟಗಳಿಗೆ, ದುಷ್ಟರಿಗೆ ಪರೋಕ್ಷವಾಗಿ ಸಹಾಯ ಸಹಕಾರ ನೀಡುವುದೂ ಇಸ್ಲಾಂ ನಿಶಿದ್ದಿಸಿದೆ. ಉತ್ತಮ‌ಸಮಾಜ ಸೇವಾ ಸಂಸ್ಥೆಗಳನ್ನು ಪ್ರೋತ್ಸಾಹಿಸುವುದು ಎಲ್ಲರ ಆದ್ಯ ಕರ್ತವ್ಯವಾಗಬೇಕು ಎಂದು ನುಡಿದರು.

ಬಳಿಕ ಮಾತನಾಡಿದ ಕೃಷ್ಣಾಪುರ ಮಿಸ್ಬಾಹ್ ನೋಲೇಜ್ ಫೌಂಡೇಶನ್ ನ ಮುಮ್ತಾಝ್ ಅಲಿ, ಸಮುದಾಯದಲ್ಲಿ ಪ್ರತೀ ಜಮಾಅತ್ ಗಳಲ್ಲಿ 1 ರಿಂದ ಇಬ್ಬರು ಮದುವೆಯ ವಯಸ್ಸು ಮೀರಿರುವ ಸಹೋದರಿಯರಿದ್ದಾರೆ ಎಂದು ಮಂಗಳೂರಿನ  ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ನ ಸರ್ಚ್ ಮಾಡಿ ತಿಳಿಸಿದ ವರದಿಯಲ್ಲಿದೆ. ಈ ಬಗ್ಗೆ ಎಲ್ಲಾ ಜಮಾಅತ್ ಗಳು ಗಮನ ಹರಿಸಬೇಕಿದೆ ಎಂದು ತಿಳಿಸಿದರು.

ಸಮಾರಂಭದಲ್ಲಿ 6 ನೂತನ ಜೋಡಿಗಳು ವಿವಾಹ ಬಂಧನಕ್ಕೆ ಒಳಗಾದರು. ಕೃಷ್ಣಾಪುರ ಮುಸ್ಲಿಂ ಜಮಾ ಅತ್ ನ ಖಾಝಿ ಅಲ್ಹಾಜ್ ಇ.ಕೆ. ಇಬ್ರಾಹಿಂ ಮದನಿ ನಿಖಾಹ್ ಕಾರ್ಯಕ್ರಮವನ್ನು ನೆರವೇರಿಸಿದರು.

ಸೈಯ್ಯದ್ ಶಿಹಾಬುದ್ದೀನ್ ಅಲ್ ಮಶ್ಹೂರ್ ತಂಞಳ್ ತಲಕ್ಕಿ ಕೇರಳ ದುವಾ ಆಶೀರ್ವಚನ ಗೈದರು.ಜೆಎಂಜೆ ಕೃಷ್ಣಾಪುರದ ಅಧ್ಯಕ್ಷ ಪಿ.ಎಂ. ಉಸ್ಮಾನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. 

ಶಾಸಕ ಮೊಯ್ದೀನ್ ಬಾವಾ, ತಾ.ಪಂ ಅದ್ಯಕ್ಣ ಮುಹಮ್ಮದ್ ಮೋನು, ಕಾರ್ಪೊರೇಟರ್ ಅಯಾಝ್, ಎಂ.ಎಸ್.‌ಶರೀಫ್, ಝಾಕೀರ್ ಹುಸೈನ್ ಟುಸ್ಟಾರ್, ಜಿ.ಪಂ ಸದಸ್ಯ ಅಬ್ದುಲ್ ಸಮದ್, ಕೆ.ಪಿ.ಸಿಸಿ ಕಾರ್ಮಿಕ ಘಟಕದ ಉಪಾಧ್ಯಕ್ಷ ಡಾ. ಕೆ.ಎಸ್. ಅಮೀರ್ ಅಹ್ಮದ್, ಫ್ಲಾಝಾ ಟವರ್ ಆಡಳಿತ ನಿರ್ದೇಶಕ ಪಿ.ಸಿ.ಬಾವಾ, ಅಬೂಬಕರ್ ಎನ್ ಎಂ ಪಿ ಟಿ, ಅಬ್ದುಲ್ ಹಕೀಂ ಪಾಲ್ಕನ್, ಪಿಸಿ ಹಾಶಿರ್ ಅಬ್ದುರ್ರಹ್ಮಾನ್, ಮುಹಮ್ಮದ್ ಮುಬೀನ್, ಮಯ್ಯದ್ದಿ ಬಿ.ಎಚ್.ಬಿ., ಝಾಕೀರ್ ಹುಸೈನ್ ಮುನವ್ವರ ಖಾಲಿದ್ ಸಾಅದಿ, ಇಸಮಾಯ್ ಸಾಅದಿ, ರಶೀದ್ ಸಖಾಫಿ, ಅಬ್ದುಲ್ ನಾಸರ್ ಮದನಿ, ಖಾಸಿಂ ಮದನಿ, ಇಸ್ಮಾಯೀಂ ಬಿಖಾರಿ ಮದನಿ, ಅಲೀ ಮದನಿ, ಮುಸ್ತಫಾ ಝಹ್ರಿ, ಯಾಕೂಬ್ ಮದನಿ, ತಾಜುದ್ದೀನ್ ಮದನಿ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News