×
Ad

ಉಡುಪಿ : ಸರ್ವ ಕಾಲೇಜು ಬಂದ್‌ಗೆ ಕರೆ

Update: 2017-02-12 21:51 IST

ಉಡುಪಿ, ಫೆ.12: ಟೋಲ್‌ಗೇಟ್ ಸುಂಕ ವಸೂಲಿಯನ್ನು ವಿರೋಧಿಸಿ ಫೆ.13ರ ಉಡುಪಿ ಜಿಲ್ಲೆ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿರುವ ಸರ್ವ ಕಾಲೇಜು ವಿದ್ಯಾರ್ಥಿ ಸಂಘ ಉಡುಪಿ ಜಿಲ್ಲಾ ಘಟಕ, ಜಿಲ್ಲೆಯ ಸರ್ವ ಕಾಲೇಜು ಬಂದ್‌ಗೆ ಕರೆ ನೀಡಿದೆ.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸದೆ ಸುಂಕ ವಸೂಲಿಗೆ ಮುಂದಾಗಿರುವುದು ಖಂಡನೀಯ. ಜಿಲ್ಲೆಯಲ್ಲಿ ಪ್ರತಿದಿನ ಮುಲ್ಕಿಯಿಂದ ಶಿರೂರಿನವರೆಗೆ 50ಸಾವಿರ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ವಾಹನ ಗಳಲ್ಲಿ ಹೋಗುತ್ತಿದ್ದು, ಇದರಿಂದ ಬಹಳ ಹೊರೆಯಾಗಲಿದೆ. ಆದುದರಿಂದ ಸಂಘ ಬಂದ್‌ಗೆ ಸಂಪೂರ್ಣ ಬೆಂಬಲ ನೀಡುತ್ತಿದೆ ಎಂದು ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ರಜತ್ ಪೂಜಾರಿ, ಅಧ್ಯಕ್ಷ ಪ್ರಜ್ವಲ್ ಕೋಟ್ಯಾನ್ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News