ಬೈಕ್ ಢಿಕ್ಕಿ: ಪಾದಾಚಾರಿ ಮೃತ್ಯು
Update: 2017-02-12 22:13 IST
ಪಡುಬಿದ್ರಿ, ಫೆ.12: ಪಡುಬಿದ್ರಿ ಕೆಳಗಿನ ಪೇಟೆ ಎಂಬಲ್ಲಿ ಇಂದು ಬೆಳಗ್ಗೆ ಬೈಕೊಂದು ಢಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ಮೃತರನ್ನು ಪಡುಬಿದ್ರಿ ಬೈಲು ತೋಟ ಮನೆಯ ನಿವಾಸಿ ವಿಠಲ ಆರ್. ಪೂಜಾರಿ(60) ಎಂದು ಗುರುತಿಸಲಾಗಿದೆ. ಇವರು ತನ್ನ ಮಗಳೊಂದಿಗೆ ಬೀಡು ಕಡೆಯಿಂದ ಕೆಳಗಿನ ಪೇಟೆ ಕಡೆಗೆ ಹಾದು ಬಂದಿರುವ ಸಾರ್ವಜನಿಕ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದಾಗ ಬೀಡು ಕಡೆಯಿಂದ ಕೆಳಪೇಟೆ ಕಡೆಗೆ ಹೋಗುತ್ತಿದ್ದ ಬೈಕ್ ವಿಠಲ್ ಪೂಜಾರಿಗೆ ಡಿಕ್ಕಿ ಹೊಡೆಯಿತು.
ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಮಣಿಪಾಲ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.