ಹೆಬ್ರಿ : ನದಿಯಲ್ಲಿ ಮುಳುಗಿ ಮೃತ್ಯು
Update: 2017-02-12 22:15 IST
ಹೆಬ್ರಿ, ಫೆ.12: ಇಲ್ಲಿಗೆ ಸಮೀಪದ ಸೀತಾನದಿಗೆ ಸ್ನಾನಕ್ಕೆಂದು ಇಳಿದ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಇಂದು ಸಂಜೆ ನಡೆದಿದೆ.
ಮೃತರನ್ನು ಶಿವಮೊಗ್ಗದ ರಾಕೇಶ್(25) ಎಂದು ಗುರುತಿಸಲಾಗಿದೆ. ಇವರು ಶಿರ್ವ ಸಮೀಪದ ಬಂಟಕಲ್ಲಿನಲ್ಲಿರುವ ದೇವಸ್ಥಾನದಲ್ಲಿ ಪೂಜೆ ಮುಗಿಸಿ ಶಿವಮೊಗ್ಗಕ್ಕೆ ಬೈಕಿನಲ್ಲಿ ಹೋಗುತ್ತಿದ್ದಾಗ, ರಸ್ತೆಬದಿಯಲ್ಲಿರುವ ಸೀತಾ ನದಿಗೆ ಸ್ನಾನಕ್ಕೆಂದು ಇಳಿದರು. ಸರಿಯಾಗಿ ಸ್ನಾನ ಬಾರದ ಇವರು ಆಕಸ್ಮಿಕ ವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟರು. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.