ಇರಿತ - ಓರ್ವನ ಬಂಧನ
Update: 2017-02-12 22:36 IST
ಮಂಗಳೂರು, ಫೆ. 12: ಪೂರ್ವ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವ ಇನ್ನೋರ್ವನಿಗೆ ಇರಿದು ಗಾಯಗೊಳಿಸಿದ ಘಟನೆ ರವಿವಾರ ಸಂಜೆ ನಾಗುರಿಯಲ್ಲಿ ನಡೆದಿದೆ.
ಗಾಯಾಳುವನ್ನು ನಾಗುರಿಯ ನಿವಾಸಿ ಎಚ್.ಆರ್.ಮಧು (25) ಮತ್ತು ಆರೋಪಿಯನ್ನು ಅದೇ ಪ್ರದೇಶದ ಕೀರ್ತಿರಾಜ್ (22) ಎಂದು ಗುರುತಿಸಲಾಗಿದೆ.
ಹಳೆ ದ್ವೇಷದ ಹಿನ್ನೆಲೆಯಲ್ಲಿ ಕೀರ್ತಿರಾಜ್ ಸ್ಟಿಕ್ಕರ್ ಕತ್ತರಿಸುವ ಬ್ಲೇಡ್‌ನಿಂದ ಮಧುವಿನ ಮುಖಕ್ಕೆ ಗೀರಿ ಗಾಯಗೊಳಿಸಿದ್ದಾನೆ ಎಂದು ಆರೋಪಿಸಲಾಗಿದೆ. ಕೀರ್ತಿರಾಜ್‌ನನ್ನು ಕಂಕನಾಡಿ ನಗರ ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.