ಹಿಟ್ ಆ್ಯಂಡ್ ರನ್: ಪಾದಚಾರಿ ಮೃತ್ಯು
Update: 2017-02-12 22:39 IST
ಮಂಗಳೂರು, ಫೆ. 12: ಬೈಕ್‌ವೊಂದು ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಪಾದಚಾರಿ ವೃದ್ಧರೊಬ್ಬರು ಮೃತಪಟ್ಟಿರುವ ಘಟನೆ ರವಿವಾರ ಮಧ್ಯಾಹ್ನ ನಗರದ ಆರ್‌ಟಿಓ ಬಳಿ ನಡೆದಿದೆ.
ಕೋಡಿಕಲ್ ನಿವಾಸಿ ಬಾಲಕೃಷ್ಣ ಪೈ (68) ಮೃತ ವ್ಯಕ್ತಿ.
ಇವರು ಎ.ಬಿ.ಶೆಟ್ಟಿ ಮೃತ್ತದ ಬಳಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಅಪರಿಚಿತ ಬೈಕ್‌ವೊಂದು ಢಿಕ್ಕಿ ಹೊಡೆದು ಪರಾರಿಯಾಗಿದೆ. ಈ ಬಗ್ಗೆ ಸಂಚಾರಿ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.