ಈಜುವ ಸಾಮರ್ಥ್ಯ ಮರಳಿ ಪಡೆದುಕೊಂಡ 200 ತಿಮಿಂಗಿಲಗಳು
Update: 2017-02-12 22:44 IST
ನ್ಯೂಝಿಲ್ಯಾಂಡ್, ಫೆ. 12: ನ್ಯೂಝಿಲ್ಯಾಂಡ್‌ನ ಕುಖ್ಯಾತ ಫೇರ್‌ವೆಲ್ ಸ್ಪಿಟ್ ಕಡಲ ತೀರದಲ್ಲಿ ಸಿಕ್ಕಿಹಾಕಿಕೊಂಡಿರುವ ಸುಮಾರು 200 ತಿಮಿಂಗಿಲಗಳು ತಮ್ಮ ಈಜುವ ಸಾಮರ್ಥ್ಯವನ್ನು ಮರಳಿ ಪಡೆದುಕೊಂಡಿವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ರವಿವಾರ ಹೇಳಿದ್ದಾರೆ.
ಆದಾಗ್ಯೂ, ಅವುಗಳು ಸ್ಥಳದಿಂದ ತೆರಳಿಲ್ಲ ಹಾಗೂ ಅವುಗಳು ಮತ್ತೆ ಆಳವಿಲ್ಲದ ಸಮುದ್ರ ತೀರದಲ್ಲಿ ಸಿಕ್ಕಿಹಾಕಿಕೊಳ್ಳುವ ಅಪಾಯವಿದೆ ಎಂದಿದ್ದಾರೆ.
ಶನಿವಾರ ತೀರಕ್ಕೆ ಬಂದ ಸುಮಾರು 17 ತಿಮಿಂಗಿಲಗಳು ತೀರದಲ್ಲೇ ಉಳಿದಿವೆ. ಈ ಪ್ರದೇಶದಲ್ಲಿ ಕಳೆದ ಮೂರು ದಿನಗಳ ಅವಧಿಯಲ್ಲಿ ನೂರಾರು ಪೈಲಟ್ ತಿಮಿಂಗಿಲಗಳು ಸಾವಿಗೀಡಾಗಿವೆ.
ಆರಂಭದಲ್ಲಿ ಸಮುದ್ರ ತೀರಕ್ಕೆ 400ಕ್ಕೂ ಅಧಿಕ ತಿಮಿಂಗಿಲಗಳು ಬಂದಿದ್ದರೆ, ಶನಿವಾರ ಹೊಸದಾಗಿ ಇನ್ನಷ್ಟು ತಿಮಿಂಗಿಲಗಳು ಬಂದಿವೆ.