×
Ad

ಬಾಫ್ಟಾ ಅವಾರ್ಡ್ಸ್ 2017: ದೇವ್ ಪಟೇಲ್‌ಗೆ ಶ್ರೇಷ್ಠ ಪೋಷಕ ನಟ ಪ್ರಶಸ್ತಿ

Update: 2017-02-13 14:10 IST

ಲಂಡನ್, ಫೆ.12: ಭಾರತ ಮೂಲದ ಬ್ರಿಟಿಷ್ ನಟ ದೇವ್ ಪಟೇಲ್ ರವಿವಾರ ಇಲ್ಲಿ ನಡೆದ ಬಾಫ್ಟಾ ಅವಾರ್ಡ್ ಕಾರ್ಯಕ್ರಮದಲ್ಲಿ ಶ್ರೇಷ್ಠ ಪೋಷಕ ನಟ ಪ್ರಶಸ್ತಿಗೆ ಭಾಜನರಾದರು. ಭಾರತೀಯ ಬಾಲಕನ ನೈಜ ಕಥೆಯಾಧಾರಿತ ‘ಲಯನ್’ ಚಿತ್ರದಲ್ಲಿ ನೀಡಿದ ಅಮೋಘ ನಟನೆಗೆ ದೇವ್‌ಗೆ ಈ ಪ್ರಶಸ್ತಿ ಒಲಿದಿದೆ. ‘ಲಯನ್’ ಚಿತ್ರ ಶ್ರೇಷ್ಠ ಚಿತ್ರಕಥೆ ಪ್ರಶಸ್ತಿಯನ್ನು ಬಾಚಿಕೊಂಡಿದೆ.

70ನೆ ಆವೃತ್ತಿಯ ಬ್ರಿಟಿಷ್ ಅಕಾಡಮಿ ಆಫ್ ಫಿಲ್ಮ್ ಹಾಗೂ ಟೆವಿಲಿಶನ್ ಆರ್ಟ್ಸ್(ಬಾಫ್ಟಾ) ಪ್ರಶಸ್ತಿಯ ವಿಜೇತರನ್ನು ಇಲ್ಲಿನ ರಾಯಲ್ ಆಲ್ಬರ್ಟ್ ಹಾಲ್‌ನಲ್ಲಿ ನಡೆದ ಭವ್ಯ ಕಾರ್ಯಕ್ರಮದಲ್ಲಿ ಘೋಷಿಸಲಾಯಿತು.

 ‘ಸ್ಲಂಡಾಗ್ ಮಿಲಿಯನೇರ್’ ಖ್ಯಾತಿಯ ದೇವ್ ಅವರು ಆ್ಯರೊನ್ ಟೇಲರ್-ಜಾನ್ಸನ್(ನಾಕ್‌ಟರ್ನಲ್ ಎನಿಮಲ್ಸ್), ಜೆಫ್ ಬ್ರಿಡ್ಜ್ಸ್(ಹೆಲ್ ಆರ್ ಹೈ ವಾಟರ್), ಹ್ಯೂಘ್ ಗ್ರಾಂಟ್(ಫ್ಲಾಂರೆನ್ಸ್ ಫೋಸ್ಟರ್ ಜೆನ್‌ಕಿನ್ಸ್) ಅವರೊಂದಿಗೆ ಪೋಷಕ ನಟ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರು.

ಇತ್ತೀಚೆಗೆ ನಡೆದ 74ನೆ ಆವೃತ್ತಿಯ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಕಾರ್ಯಕ್ರಮದಲ್ಲಿ ದೇವ್ ಅವರು ಶ್ರೇಷ್ಠ ಪೋಷಕ ನಟ ಪ್ರಶಸ್ತಿಯಿಂದ ವಂಚಿತರಾಗಿದ್ದರು. ಈ ಪ್ರಶಸ್ತಿಯು ಆ್ಯರೊನ್ ಟೇಲರ್ ಪಾಲಾಗಿತ್ತು.

 ಬಾಫ್ಟಾ ಪ್ರಶಸ್ತಿಯನ್ನು ಗೆದ್ದ ಬಳಿಕ ದೇವ್‌ಗೆ ಅವಕಾಶಗಳು ಹೆಚ್ಚಾಗಿದ್ದು, ಆಸ್ಕರ್ ಪ್ರಶಸ್ತಿಯನ್ನು ಪಡೆಯುವ ಸಾಧ್ಯತೆಯೂ ಇದೆ.

 ‘‘ಈ ಪ್ರಶಸ್ತಿ ಅಚ್ಚರಿ ತರಲಿಲ್ಲ ಎಂದರೆ ಸುಳ್ಳು ಹೇಳಿದಂತಾಗುತ್ತದೆ. ಪ್ರಶಸ್ತಿಯು ಎಲ್ಲರ ಬದುಕಿನಲ್ಲೂ ನಿಜವಾದ ಬದಲಾವಣೆ ತರುತ್ತದೆ. ಪ್ರಶಸ್ತಿ ನಮ್ಮನ್ನು ಎಲ್ಲರೂ ಗುರುತಿಸುವಂತೆ ಮಾಡುತ್ತದೆ’’ ಎಂದು ದೇವ್ ಪ್ರತಿಕ್ರಿಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News