‘ಚಲೋ ತುಮಕೂರು’ಗೆ ಚಲೋ ಉಡುಪಿ ತಂಡ
ಉಡುಪಿ, ಫೆ.13: ಈ ತಿಂಗಳ 16ರಂದು ನಡೆಯಲಿರುವ ‘ಚಲೋ ತುಮಕೂರು’ ಮಾನವತಾ ಸಮಾವೇಶ ಹಾಗೂ ಸ್ವಾಭಿಮಾನಿ ಸಂಕಲ್ಪ ನಡಿಗೆ ಯಲ್ಲಿ ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿಯ ಉಡುಪಿ ಜಿಲ್ಲಾ ಘಟಕವು ಪಾಲ್ಗೊಳ್ಳುತ್ತಿದ್ದು, ಉಡುಪಿಯಿಂದ ಸುಮಾರು 500 ಮಂದಿ ತುಮಕೂರಿಗೆ ತೆರಳಲಿದ್ದಾರೆ.
ಕೆಲ ದಿನಗಳ ಹಿಂದೆ ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ಅಭಿಷೇಕ್ ಎಂಬ ದಲಿತ ಯುವಕನನ್ನು ಬೆತ್ತಲೆಗೊಳಿಸಿ, ಕೊರಳಿಗೆ ಚಪ್ಪಲಿ ಹಾರ ಹಾಕಿ ಮನಬಂದಂತೆ ಬಡಿದು ಸಾಯುವ ಸ್ಥಿತಿಯಲ್ಲಿ ಸ್ಮಶಾನವೊಂದರ ಬಳಿ ಎಸೆದು ಹೋಗಲಾಗಿತ್ತು. ಹಲ್ಲೆ ನಡೆಸಿದವರ ಮೇಲೆ ಕೇಸ್ ದಾಖಲಾಗಿ ಬಂಧಿತರಾಗಿ ದ್ದರೂ ಸಹ ಕಿಡ್ನಾಪ್ ಮಾಡಿ, ಕೊಲೆ ಬೆದರಿಕೆ ನಡೆಸಿರುವ ಬಗ್ಗೆ ಪ್ರಕರಣ ಗಳನ್ನು ದಾಖಲಿಸಿರಲಿಲ್ಲ. ಇಡೀ ಪ್ರಕರಣವನ್ನು ದಿಕ್ಕು ತಪ್ಪಿಸಲು ಅಭಿಷೇಕ್ ವಿರುದ್ಧ ಪೋಕ್ಸೋ ಕಾಯ್ದೆ ಅಡಿ ಕೇಸ್ ದಾಖಲಿಸಿರುವುದು ಖಂಡನೀಯ ಎಂದು ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿಯ ತಿಳಿಸಿದೆ.
ಇತ್ತೀಚೆಗೆ ಜಮಖಂಡಿಯಲ್ಲಿ ಹಸಿವಿನಿಂದ ದೇವಸ್ಥಾನದಲ್ಲಿ ಪ್ರಸಾದ ತಿಂದ 15 ವರ್ಷದ ದಲಿತ ಬಾಲಕನನ್ನು ಅಡಿಗೆ ಸೌಟಿನಿಂದಲೇ ಬಡಿದು ಕೊಂದ ದಾರುಣ ಘಟನೆ ನಡೆಯಿತು. ಗುಡಿಬಂಡೆಯಲ್ಲಿ ಮುರುಳಿ ಎಂಬ 9ನೆ ತರಗತಿ ಬಾಲಕನನ್ನು ಮೇಲ್ಜಾತಿ ಹುಡುಗಿಯನ್ನು ಮಾತಾಡಿಸಿದ್ದಕ್ಕೆ ಥಳಿಸಿ, ಆತನ ದೇಹ ನೇಣುಹಾಕಿಕೊಂಡ ಸ್ಥಿತಿಯಲ್ಲಿ ಸಿಕ್ಕಿತು. ಲಕ್ಕವಳ್ಳಿಯಲ್ಲಿ ಸುಡು ಗಾಡು ಸಿದ್ದ ಮಹಿಳೆಯ ಮೇಲೆ ಅತ್ಯಾಚಾರ ಪ್ರಯತ್ನ ನಡೆದು ಆಕೆಯ ಇಡೀ ಕುಟುಂಬವನ್ನೇ ಜೀವಂತ ಸುಡುವ ಪ್ರಯತ್ನ ನಡೆಯಿತು ಎಂದು ಸಮಿತಿ ಆರೋಪಿಸಿದೆ.
ಇಂತಹ ನೂರಾರು ಘಟನೆಗಳು ನಿರಂತರವಾಗಿ ನಡೆಯುತ್ತಿದ್ದರೂ ನಮ್ಮ ವ್ಯವಸ್ಥೆ ಮೂಕವಾಗಿದೆ. ಈ ದೌರ್ಜನ್ಯ ಘಟನೆಗಳಲ್ಲಿ ನ್ಯಾಯ ಎಂಬುದು ಮರೀಚಿಕೆಯಾಗಿದೆ. ಅದೇ ರೀತಿ ಇತ್ತೀಚೆಗೆ ಸುಪ್ರೀಂ ಕೋರ್ಟ್ ಎಸ್‌ಸಿ/ ಎಸ್‌ಟಿ ವರ್ಗದ ಸರಕಾರಿ ನೌಕರರಿಗೆ ಭಡ್ತಿ ನೀಡಬಾರದೆಂದು ತೀರ್ಪು ನೀಡಿದ್ದು, ಇದರ ಬಗ್ಗೆ ಕರ್ನಾಟಕ ರಾಜ್ಯ ಸರಕಾರವು ಮೇಲ್ಮನವಿ ಸಲ್ಲಿಸ ಬೇಕೆಂದು ಸಮಿತಿಯು ಸರಕಾರವನ್ನು ಆಗ್ರಹಿಸಿದೆ.
ಈ ಹಿನ್ನೆಲೆಯಲ್ಲಿ ನಾಡಿನಲ್ಲಿ ಜಾತಿದೌರ್ಜನ್ಯಗಳು ಕೊನೆಗೊಳ್ಳಲಿ, ಮನುಷ್ಯರು ಪರಸ್ಪರ ಜಾತಿಜಾತಿಗಳಾಗಿ ನೋಡದೇ ಮನುಷ್ಯ ಮನುಷ್ಯರಾಗಿ ನೋಡುವಂತಾಗಲಿ, ನೊಂದ ಜೀವಗಳಿಗೆ ನ್ಯಾಯ ಸಿಗಲಿ, ಸಂವಿಧಾನದ ತತ್ವಗಳಾದ ಸಹೋದರತೆ, ಸಹಬಾಳ್ವೆಗಳು ನೆಲೆಗೊಳ್ಳಲಿ ಎಂಬ ಆಶಯಗಳ ನ್ನಿಟ್ಟುಕೊಂಡು ತುಮಕೂರಿನಲ್ಲಿ ಹಮ್ಮಿಕೊಳ್ಳಲಾಗಿರುವ ಮಾನವತಾ ಸಮಾವೇಶವನ್ನು ಬೆಂಬಲಿಸಿ ಉಡುಪಿ ಸಮಿತಿಯ ಸುಮಾರು 500 ಮಂದಿ ತುಮಕೂರಿಗೆ ತೆರಳಲಿದ್ದಾರೆ.
ಫೆ.16ರ ಬೆಳಿಗ್ಗೆ 10ಗಂಟೆಗೆ ತುಮಕೂರಿನ ಭೀಮಸಂದ್ರದಿಂದ ಸ್ವಾಭಿಮಾನಿ ಸಂಕಲ್ಪನಡಿಗೆ ಚಾಲನೆಗೊಂಡು ಟೌನ್‌ಹಾಲ್ ಲೈಬ್ರರಿ ಆವರಣದಲ್ಲಿ ಸಮಾವೇಶಗೊಳ್ಳಲಿದೆ. ನಾಡಿನ ಹಲವು ಚಿಂತಕರು, ಸಾಹಿತಿಗಳು, ದಲಿತ- ಪ್ರಗತಿಪರ ಸಂಘಟನೆಗಳ ಪ್ರತಿನಿಧಿಗಳು ಈ ಸಮಾವೇಶದಲ್ಲಿ ಭಾಗವಹಿಸಲಿ ರುವರು ಎಂದು ಸಮಿತಿಯ ಜಿಲ್ಲಾಧ್ಯಕ್ಷ ಸುಂದರ ಮಾಸ್ತರ್, ಸಂಚಾಲಕ ರಾದ ಶ್ಯಾಮರಾಜ ಬಿರ್ತಿ, ಹುಸೇನ್ ಕೋಡಿಬೆಂಗ್ರೆ, ಕೋಶಾಧಿಕಾರಿ ಕೆ. ಫಣಿರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.