ಹಿರಿಯ ನಾಗರಿಕರಿಗೆ ಮಾಹಿತಿ ಶಿಬಿರ
Update: 2017-02-13 18:24 IST
ಉಡುಪಿ, ಫೆ.13: ಉಡುಪಿ ಹಿರಿಯ ನಾಗರಿಕ ಸಂಸ್ಥೆಯ ವತಿಯಿಂದ ವೃದ್ದಾಪ್ಯದಲ್ಲಿ ಬೀಳುವ ಸಮಸ್ಯೆ ಮತ್ತು ಪರಿಹಾರದ ಕುರಿತ ಮಾಹಿತಿ ಹಾಗೂ ಉಚಿತ ತಪಾಸಣಾ ಶಿಬಿರವನ್ನು ಇತ್ತೀಚೆಗೆ ಅಜ್ಜರಕಾಡು ಯುದ್ದ ಸ್ಮಾರಕ ಬಳಿಯ ಯೋಗ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಮಣಿಪಾಲ ಕೆಎಂಸಿ ಆಸ್ಪತ್ರೆಯ ಅಕ್ಯೂಪೇಶನ್ ಚಿಕಿತ್ಸಾ ವಿಭಾಗದ ಮುಖ್ಯಸ್ಥೆ ಡಾ.ಸೆಬೆಸ್ಟಿನ್ ಅನಿತಾ ಡಿಸೋಜ ಮಾಹಿತಿ ನೀಡಿದರು. ಸಂಸ್ಥೆಯ ಗೌರವಾಧ್ಯಕ್ಷ ಎ.ಪಿ.ಕೊಡಂಚ ಅಧ್ಯಕ್ಷತೆ ವಹಿಸಿದ್ದರು.
ಅಧ್ಯಕ್ಷ ಸಿ.ಎಸ್.ರಾವ್ ಸ್ವಾಗತಿಸಿದರು. ಉಪಾಧ್ಯಕ್ಷ ಎಚ್.ವಿ.ಹೆಗ್ಡೆ ವಂದಿಸಿದರು. ಮಾಲತಿ ತಂತ್ರಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವೈದ್ಯಕೀಯ ವಿದಾ್ಯರ್ಥಿಗಳಿಂದ ಕಿರು ನಾಟಕ ನಡೆಯಿತು.