ರಾಷ್ಟ್ರಪತಿಯ ಸಂಬಳ ಕಾರ್ಯದರ್ಶಿಗಳಿಗಿಂತ ಕಡಿಮೆ!

Update: 2017-02-13 13:16 GMT

ಹೊಸದಿಲ್ಲಿ,ಫೆ.13: ರಾಷ್ಟ್ರಪತಿ, ಉಪರಾಷ್ಟ್ರಪತಿ, ರಾಜ್ಯಪಾಲರುಗಳ ಸಂಬಳ ಹೆಚ್ಚಿಸುವ ಕ್ರಮ ವಿಳಂಬವಾಗುತ್ತಿದೆ. ಏಳನೆ ವೇತನಾ ಆಯೋಗದ ವರದಿ ಜಾರಿಗೊಳಿಸಲು ಮುಂದಾಗುವ ವೇಳೆ ರಾಷ್ಟ್ರಪತಿ ಸಹಿತ ಸಂಬಳ ಹೆಚ್ಚಿಸುವ ಪ್ರಕ್ರಿಯೆ ಬರೇ ಕಾಗದಕ್ಕೆ ಮೀಸಲಾಗುವ ಪ್ರಮೇಯ ಒದಗಿದೆ. ಆರನೆ ವೇತನಾ ಆಯೋಗದ ವರದಿ ಜಾರಿಗೆ ತರುವುದರೊಂದಿಗೆ ಜಂಟಿ ಕಾರ್ಯದರ್ಶಿಗಳ(ಜಾಯಿಂಟ್ ಸೆಕ್ರಟರಿ) ಸಂಬಳಕ್ಕಿಂತ ರಾಷ್ಟ್ರಪತಿಯ ಸಂಬಳ ಕಡಿಮೆ ಆಗಲಿದೆ.ಈಗ ರಾಷ್ಟ್ರಪತಿ,ಉಪರಾಷ್ಟ್ರಪತಿ, ರಾಜ್ಯಪಾಲರು ಮುಂತಾದವರ ಸಂಬಳವನ್ನು ಹೆಚ್ಚಿಸುವ ಗೃಹಸಚಿವಾಲಯದ ಶಿಫಾರಸು ಪ್ರಧಾನಿಯ ಅನುಮತಿಗಾಗಿ ಕಾಯುತ್ತಿದೆ. ರಾಷ್ಟ್ರಪತಿಗೆ ಈಗ ಪ್ರತಿತಿಂಗಳು1.5 ಲಕ್ಷ ಇರುವ ಸಂಬಳವನ್ನು ಐದು ಲಕ್ಷ ರೂಪಾಯಿಗೆ ಏರಿಸಬೇಕೆಂದು ಶಿಫಾರಸು ಮಾಡಲಾಗಿದೆ.

ಉಪರಾಷ್ಟ್ರಪತಿಗೆ 1.1 ಲಕ್ಷ ದಿಂದ 3.5 ಲಕ್ಷರೂಪಾಯಿ ಏರಿಕೆ ಮಾಡಬೇಕೆಂದು ಗೃಹಸಚಿವಾಲಯ ಸೂಚಿಸಿದೆ. ಆರು ತಿಂಗಳ ಹಿಂದೆ ಶಿಫಾರಸನ್ನು ಪ್ರಧಾನಿ ಕಚೇರಿಗೆ ತಲುಪಿಸಲಾಗಿದ್ದರೂ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.

ಫೈಲಿಗೆ ಪ್ರಧಾನಿ ಅನುಮತಿ ನೀಡಿದರೆ ಮಾತ್ರ ಪಾರ್ಲಿಮೆಂಟ್ ಅಂಗೀಕಾರಕ್ಕಾಗಿ ಮುಂದೆ ಹೋಗುತ್ತದೆ. ಪಾರ್ಲಿಮೆಂಟ್ ಸದಸ್ಯರ ಸಂಬಳ ಹೆಚ್ಚಳದ ಶಿಫಾರಿಸಿನ ಕಡತವೂ ವಿಲೇವಾರಿಯಾಗಿಲ್ಲ. ಸಂಸದರ ಸಂಬಳ 1.4 ಲಕ್ಷ ದಿಂದ 2.8 ಲಕ್ಷರೂಪಾಯಿಗೆ ಹೆಚ್ಚಳಗೊಳಿಸಬೇಕೆಂದು ಪಾರ್ಲಿಮೆಂಟ್ ಸಮಿತಿ ಆಗ್ರಹಿಸಿತ್ತು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News