ಉಳ್ಳಾಲ: ಉಚಿತ ವೈದ್ಯಕೀಯ ಶಿಬಿರ
ಉಳ್ಳಾಲ,ಫೆ.13: ಮುಟ್ಟಾಜೆ ಕುಂಞಾಲಿ ಹಾಜಿ ಮತ್ತು ಪಾರೆ ಕುಟುಂಬಗಳಂತಹ ಕುಟುಂಬಗಳು ತಮ್ಮ ತಮ್ಮ ಗ್ರಾಮದಲ್ಲಿ ಇಂತಹ ಉಚಿತ ವೈದ್ಯಕೀಯ ಶಿಬಿರಗಳನ್ನು ಅಯೋಜಿಸುದರಿಂದ ರೋಗ ಮುಕ್ತ ಗ್ರಾಮವಾಗಿ ನಿರ್ಮಾಣವಾಗಲು ಸಾಧ್ಯ ಎಂದು ಕುರ್ನಾಡು ಕ್ಷೇತ್ರ ಜಿಲ್ಲಾ ಪಂಚಾಯತ್ ಸದಸ್ಯೆ ಮಮತಾ ಗಟ್ಟಿ ಅಭಿಪ್ರಾಯಪಟ್ಟರು.
ಅವರು ಮುಟ್ಟಾಜೆ ಕುಂಞಾಲಿ ಹಾಜಿ ಎಸೋಸಿಯೇಶನ್ ಇದರ ಆಶ್ರಯದಲ್ಲಿ ಪಾರೆ ಫ್ಯಾಮಿಲಿಯ ಸಹಯೋಗದೊಂದಿಗೆ ಮರ್ಹೂಂ ಎಂ.ಪಿ.ಇಸ್ಮಾಯಿಲ್ ಹಾಜಿ ಪಾರೆ ಮತ್ತು ಮರ್ಹೂಂ ನೆಫೀಸಾ ಇಸ್ಮಾಯಿಲ್ ಮುಟ್ಟಾಜೆಯವರ ಸ್ಮರಣಾರ್ಥ ರವಿವಾರ ನಂರಿಗಾನ ಕೊಲ್ಲರಕೋಡಿ ಸರಕಾರಿ ಪ್ರೌಢಶಾಲೆಯಲ್ಲಿ ಅಯೋಜಿಸಿದ ಉಚಿತ ವೈದ್ಯಕೀಯ ಶಿಬಿರದ ಸಭಾಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಬಡ ರೋಗಿಗಳು ಇಂದು ಖಾಸಗಿ ಅಸ್ಪತ್ರೆಗಳಿಗೆ ಹೋಗಲು ಭಯಪಡುವ ಕಾಲದಲ್ಲಿ. ಗ್ರಾಮೀಣ ಪ್ರದೇಶದಲ್ಲಿ ಇಂತಹ ಸೇವ ನೀಡುತ್ತಿರುವ ಮುಟ್ಟಾಜೆ ಕುಂಞಾಲಿ ಹಾಜಿ ಎಸೋಸಿಯೇಶನ್ ಮತ್ತು ಪಾರೆ ಫ್ಯಾಮಿಲಿಯ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಎಮ್.ಕೆ.ಎಚ್.ಎಫ್ ಎಸೋಸಿಯೇಶನ್ ಅಧ್ಯಕ್ಷ ಡಾ. ಕುಂಞಾಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಡಾ. ಕುಂಞಾಲಿ, ಎಮ್.ಕೆ.ಎಚ್.ಎಫ್ ಎಸೋಸಿಯೇಶನ್ ಪೋಷಕ ಹಾಜಿ ಅಬೂಬಕ್ಕರ್ ಮುಟ್ಟಾಜೆ, ಭಾರತ ಸರಕಾರದ ಆಹಾರ ಸಂಸ್ಕರಣಾ ಸಚಿವಾಲಯದ ನಿವೃತ್ತ ಉಪ ನಿರ್ದೇಶಕ ಎನ್. ಇಬ್ರಾಹಿಂ, ಮಾಜಿ ನ್ಯಾಯಾಂಗ ಸದಸ್ಯರು ಕರ್ನಾಟಕ ರಾಜ್ಯ ಆಡಳಿತಾತ್ಮಕ ಟ್ರಿಬ್ಯೂನಲ್ ಜಸ್ಟೀಸ್ ಮೂಸ ಕುಂಞ ನಾಯರ್‌ಮೂಲೆ ಮತ್ತು ಹಾಜಿ ಅಬೂಸಾಲಿ ಪಾರೆ ಸನ್ಮಾನಿಸಲಾಯಿತು.
ಕರ್ನಾಟಕ ಜಮಾಅತ್ ಕೌನ್ಸಿಲ್ ದ.ಕ. ಜಿಲ್ಲಾ ಅಧ್ಯಕ್ಷರು ಹೈದರ್ ಪರ್ತಿಪ್ಪಾಡಿ, ನರಿಂಗಾನ ಗ್ರಾಮ ಪಂಚಾಯತ್ ಅಧ್ಯಕ್ಷರ ಇಸ್ಮಾಯಿಲ್ ಮೀನಂಕೋಡಿ, ನರಿಂಗಾನ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ನಳಿನಾಕ್ಷಿ, ನರಿಂಗಾನ ಗ್ರಾಮ ಪಂಚಾಯತ್ ಸದಸ್ಯರು ಅಬ್ದುಲ್ ಖಾದರ್, ಬೆಂಗಳೂರು ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯಗಳ ಸಿಂಡಿಕೇಟ್ ಸದಸ್ಯ ಡಾ. ಯು.ಟಿ ಇಪ್ತಿಕಾರ್, ಡಾ.ಮೂಸಬ್ಬ, ಡಾ. ಜಲಾಲುದ್ದೀನ್ ಅಕ್ಬರ್, ಪ್ರ.ಕಾರ್ಯದರ್ಶಿ ಹಮೀದ್ ಪಾರೆ, ಕೋಶಾಧಿಕಾರಿ ಹನೀಫ್ ಮುಟ್ಟಾಜೆ, ಕಾರ್ಯದರ್ಶಿಗಳಾದ ಡಾ.ಫಝಲ್, ನೆಫೀಸ ಉಮರ್, ಸದಸ್ಯರಾದ ಇಬ್ರಾಹೀಂ ಕುಂಞ ಪಾರೆ, ಅಬ್ದುಲ್ಲಾ ಪಾರೆ ಮುಂತಾದವರು ಈ ಸಂದರ್ಭ ಉಪಸ್ಥಿತರಿದರು.
ಸಂಚಾಲಕ ಅಲಿಕುಂಞ ಪಾರೆ ಸ್ವಾಗತಿಸಿ. ಸಂಚಾಲಕ ಸಿದ್ದೀಕ್ ಪಾರೆ ವಂದಿಸಿರು.