×
Ad

ಅಡ್ಡೂರು: ರಕ್ತದಾನ ಶಿಬಿರ

Update: 2017-02-13 19:33 IST

ಮಂಗಳೂರು, ಫೆ.13: ಸೆಂಟ್ರಲ್ ಕಮಿಟಿ ಅಡ್ಡೂರ್ ಇದರ ಕಚೇರಿ ಉದ್ಘಾಟನೆಯ ಪ್ರಯುಕ್ತ ಬ್ಲಡ್ ಹೆಲ್ಪ್‌ಲೈನ್ ಕರ್ನಾಟಕ ಇದರ ವತಿಯಿಂದ ಫಾದರ್ ಮುಲ್ಲರ್ ಆಸ್ಪತ್ರೆ ಕಂಕನಾಡಿ ಇದರ ಸಹಭಾಗಿತ್ವದಲ್ಲಿ ಅಡ್ಡೂರು ಸರಕಾರಿ ಶಾಲೆಯಲ್ಲಿ ರವಿವಾರ ರಕ್ತದಾನ ಶಿಬಿರ ನಡೆಯಿತು.

 ಬ್ಲಡ್ ಹೆಲ್ಪ್‌ಲೈನ್ ಅಡ್ಡೂರು ಘಟಕದ ಎಡ್ಮಿನ್ ಡಾ. ಇ.ಕೆ.ಎ ಸಿದ್ದೀಕ್ ಅಡ್ಡೂರು ರಕ್ತದಾನ ಮಾಡುವ ಮೂಲಕ ಶಿಬಿರ ಉದ್ಘಾಟಿಸಿದರು. ಸೆಂಟ್ರಲ್ ಕಮಿಟಿ ಅಡ್ಡೂರು ಅಧ್ಯಕ್ಷ ಎಂ. ಶರೀಫ್ ಅಳಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬ್ಲಡ್‌ಹೆಲ್ಪ್ ಲೈನ್ ಕರ್ನಾಟಕ ಸ್ಥಾಪಕಾಧ್ಯಕ್ಷ ನಿಸಾರ್ ದಮ್ಮಾಮ್ ಉಳ್ಳಾಲ್‌ರನ್ನು ಸನ್ಮಾನಿಸಲಾಯಿತು.

 ಈ ಸಂದರ್ಭ ಡಾ.ವಾಸು, ಜಿಪಂ ಸದಸ್ಯ ಯು.ಪಿ. ಇಬ್ರಾಹೀಂ ಅಡ್ಡೂರು, ಅಡ್ಡೂರು ಬದ್ರಿಯ ಜುಮಾ ಮಸೀದಿಯ ಅಧ್ಯಕ್ಷ ಟಿ. ಸೈಯದ್ ತೋಕೂರು, ಕಾಂಜಲಕೋಡಿ ಬದ್ರುಲ್ ಹುದಾ ಜುಮಾ ಮಸೀದಿಯ ಅಧ್ಯಕ್ಷ ಎಂ.ಎ. ಅಹ್ಮದ್ ಬಾವಾ, ಸೆಂಟ್ರಲ್ ಕಮಿಟಿಯ ಸಲಹೆಗಾರ ಅಬ್ದುರ್ರಹ್ಮಾನ್, ಗುರುಪುರ ಗ್ರಾಪಂ ಅಧ್ಯಕ್ಷೆ ರುಕಿಯಾ, ಸದಸ್ಯೆ ಜಯಲಾಕ್ಷಿ, ಸದಸ್ಯ ಎ.ಕೆ ರಿಯಾಝ್ ಅಡ್ಡೂರು, ಗಲ್ಫ್ ಕಮಿಟಿಯ ಎ.ಪಿ. ಶರೀಫ್, ಎಸ್‌ಡಿಪಿಐ ಅಡ್ಡೂರು ಘಟಕದ ಅಧ್ಯಕ್ಷ ಎ.ಕೆ. ಮುಸ್ತಫಾ ಕುಚ್ಚಿಗುಡ್ಡೆ, ಇಪ್ತಿಕಾರ್ ಅಹ್ಮದ್, ಸಮಾಜ ಸೇವಕ ಅಹ್ಮದ್ ಬಾವ ಅಂಗಡಿಮನೆ, ಅಡ್ಡೂರು ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ಅಬ್ದುಲ್ ಜಲೀಲ್, ಬ್ಲಡ್‌ಹೆಲ್ಪ್ ಲೈನ್ ಕರ್ನಾಟಕ ಸ್ಥಾಪಕಾಧ್ಯಕ್ಷ ನಿಸಾರ್ ದಮ್ಮಾಮ್ ಉಳ್ಳಾಲ, ಸದಸ್ಯ ಸತ್ತಾರ್, ಏಡ್ಮಿನ್‌ಗಳಾದ ಮುಸ್ತಫಾ ದೆಮ್ಮಲೆ ಅಡ್ಡೂರು, ನಿಝಾಮ್ ನಿಜ್ಜು ಮಂಗಳೂರು, ಅಶಿಕ್ ಕುಕ್ಕಾಜೆ, ಅಸ್ತಾರ್ ಅಡ್ಡೂರು, ಎಂ.ಎಸ್. ಹಬೀಬ್, ಎ.ಎನ್. ಅಬ್ದುರ್ರಝಾಕ್, ಮುಹಮ್ಮದ್ ಶರೀಫ್, ಡಿ.ಎಸ್. ಅಶ್ರಫ್, ಎ.ಕೆ. ಇಸ್ಮಾಯೀಲ್ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News