ಫೆ.18ರಂದು ಲಯನ್ಸ್ ಪ್ರಾಂತೀಯ ಸಮ್ಮೇಳನ
ಮೂಡುಬಿದಿರೆ,ಫೆ.13 : 2 ಲಯನ್ಸ್ ವಲಯಗಳನ್ನು ಹೊಂದಿರುವ ಲಯನ್ಸ್ ಪ್ರಾಂತ್ಯದ ಪ್ರಾಂತೀಯ ಸಮ್ಮೇಳನವು ಫೆ.18ರಂದು ಒಂಟಿಕಟ್ಟೆಯ ಸಂಜೀವ ಶೆಟ್ಟಿ ಮಲ್ಟಿಪರ್ಪಸ್ ಹಾಲ್‌ನಲ್ಲಿ ನಡೆಯಲಿದೆಎಂದು ಲಯನ್ಸ್ ಪ್ರಾಂತೀಯ ಅಧ್ಯಕ್ಷ ಪ್ರಮಥ್ ಕುಮಾರ್ ಹೇಳಿದರು.
ಅವರು ಮೂಡುಬಿದಿರೆ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಮೂಡುಬಿದಿರೆ, ಅಲಂಗಾರು, ಶಿರ್ತಾಡಿ, ತೋಡಾರು, ಮಿಜಾರು, ಬೆಳ್ತಂಗಡಿ, ವೇಣೂರು, ಅಳದಂಗಡಿ, ನಾರಾವಿ ಲಯನ್ಸ್ ಕ್ಲಬ್‌ಗಳನ್ನೊಳಗೊಂಡ ಈ ಪ್ರಾಂತ್ಯವು ಹಲವಾರು ಸಾಮಾಜಿಕ ಚಟುವಟಿಕೆಗಳನ್ನು ಕೈಗೊಂಡಿದೆ. ಎಲ್ಲಾ ಕ್ಲಬ್‌ಗಳ ಹಿರಿಯ ಹಾಗೂ ಉತ್ಸಾಹಿ ಸದಸ್ಯರ ಸಮಿತಿಯೊಂದನ್ನು ರಚಿಸಲಾಗಿದ್ದು, ಸಮ್ಮೇಳನವನ್ನು ಸಮಾಜಸೇವೆಯ ಉದ್ದೇಶಗಳಿಂದ ಯಶಸ್ವಿಗೊಳಿಸಲು ನಿರ್ಣಯಿಸಲಾಗಿದೆಎಂದರು.
ಅಂತಾರಾಷ್ಟ್ರೀಯ ಲಯನ್ಸ್ ಸೇವಾ ಸಂಸ್ಥೆಯ ಶತಮಾನೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಸೇವಾ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗಿದೆ. ಹೋಮ್ ಫಾರ್ ಹೋಮ್ ಲೆಸ್ ಕಾರ್ಯಕ್ರಮದಡಿಯಲ್ಲಿ ಸುಮತಿ ಶೆಟ್ಟಿ ಎಂಬ ಮಹಿಳೆಗೆ 3.60 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಿಕೊಡಲಾಗಿದ್ದು, ಇತ್ತೀಚಿಗೆ ಹಸ್ತಾಂತರಿಸಲಾಗಿದೆ. ಇದರ ಜೊತೆಗೆ ಮೂಡುಬಿದಿರೆ ಪುರಸಭೆಗೆ ಕೊಡಮಾಡುವ 25 ಲಕ್ಷ ರೂ. ವೆಚ್ಚದ ಸಾರ್ವಜನಿಕ ಲಯನ್ಸ್ ಉದ್ಯಾನವನದ ಕಾಮಗಾರಿಗೆ ಚಾಲನೆ ನೀಡಲಾಗಿದೆಎಂದರು.
ಈ ಕಾರ್ಯಕ್ರಮವನ್ನು ಪ್ರಾಂತ್ಯದ ಪ್ರಥಮ ಮಹಿಳೆ ಲ ಸುಪ್ರಭಾ ಪ್ರಮಥ್ ಕುಮಾರ್ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಅದಾನಿ ಯುಪಿಸಿಎಲ್‌ನ ಜಂಟಿ ಅಧ್ಯಕ್ಷರಾದ ಕಿಶೋರ್ ಆಳ್ವ, ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತ ಬಿ.ಎ. ನಾಣಿಯಪ್ಪ ಭಾಗವಹಿಸಲಿದ್ದಾರೆ. ಈ ಸಂದರ್ಭ ರಾಷ್ಟ್ರಪ್ರಶಸ್ತಿ ವಿಜೇತೆ ಮೂಡುಬಿದಿರೆಯ ವಿದ್ಯಾರ್ಥಿನಿ ಪಂಚಮಿ ಮಾರೂರು ಹಾಗೂ ಮೂಡುಬಿದಿರೆಯ ಸಾಧಕ ಉದ್ಯಮಿ ಗಣೇಶ್ ಕಾಮತ್ ಅವರಿಗೆ ಸನ್ಮಾನವನ್ನೂ ಹಮ್ಮಿಕೊಳ್ಳಲಾಗಿದೆಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀಪತಿ ಭಟ್, ಅಂಡ್ಯ್ರೂ ಡಿಸೋಜಾ, ರುಕ್ಕಯ್ಯ ಪೂಜಾರಿ, ಮುನ್ನಾರಾವ್, ಶಿವಪ್ರಸಾದ್ ಹೆಗ್ಡೆ ಉಪಸ್ಥಿತರಿದ್ದರು.