×
Ad

ಜಾನಪದೀಯ ಕಂಗೀಲು ನೃತ್ಯದ ದಾಖಲೀಕರಣ

Update: 2017-02-13 21:44 IST

ಉಡುಪಿ, ಫೆ.13: ಉಡುಪಿ ಪ್ರಾಚ್ಯಸಂಚಯ ಸಂಶೋಧನ ಕೇಂದ್ರದ ವತಿಯಿಂದ ಉಡುಪಿ ತುಳು ಕೂಟದ ಮತ್ತು ಉಡುಪಿ ಚಿತ್ರಕಲಾ ಮಂದಿರ

ಕಲಾ ವಿದ್ಯಾಲಯದ ಸಹಭಾಗಿತ್ವದೊಂದಿಗೆ ಅರ್ನಾಲ್ಡ್ ಬಾಕೆ 1938 ಮರು ಅಧ್ಯಯನ: ಜಾನಪದೀಯ ಕಂಗೀಲು ನೃತ್ಯದ ದಾಖಲೀಕರಣ ಕಾರ್ಯಕ್ರಮವನ್ನು ಸೋಮವಾರ ಉಡುಪಿ ಬಡಗುಬೆಟ್ಟು ಸೊಸೈಟಿಯ ಜಗನ್ನಾಥ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.

 ಕೇಂದ್ರದ ಸಂಸ್ಥಾಪಕ ನಿರ್ದೇಶಕ ಎಸ್.ಎ.ಕೃಷ್ಣಯ್ಯ ಮಾತನಾಡಿ, ಅರ್ನಾಲ್ಡ್ ಬಾಕೆ ಅಧ್ಯಯನಕ್ಕಾಗಿ 1934ರ ದಶಕದಲ್ಲಿ ಭಾರತಕ್ಕೆ ಬಂದಾಗ ನಡೆಸಿದ ಸುಮಾರು 700 ಕಲಾ ಪ್ರಕಾರಗಳ ದಾಖಲೀಕರಣಗಳಲ್ಲಿ ಕಂಗೀಲು ಕಲಾ ಪ್ರಕಾರ ಕೂಡ ಒಂದು. ಇದನ್ನು ಅವರು ಮಂಗಳೂರು ಮತ್ತು ಪುತ್ತೂರಿನಲ್ಲಿ ದಾಖಲೀಕರಿಸಿದ್ದರು ಎಂದು ಅವರು ತಿಳಿಸಿದರು.

ಅಂದು ಅರ್ನಾಲ್ಡ್ ಬಾಕೆ ದಾಖಲೀಕರಣ ಮಾಡಿರುವ ಆ ಎರಡು ಪ್ರದೇಶ ಗಳಲ್ಲಿ ಈ ಕಲಾ ಪ್ರಕಾರ ಇಂದು ಉಳಿದಿಲ್ಲ. ಪ್ರಸ್ತುತ ಉಡುಪಿ ಜಿಲ್ಲೆಯ ಕಟಪಾಡಿ ಮಟ್ಟು, ಪಡುಬಿದ್ರಿ, ಹೆಜಮಾಡಿಯಲ್ಲಿ ಮಾತ್ರ ಉಳಿದು ಕೊಂಡಿದೆ. ಆದಿವಾಸಿ ಬುಡಕಟ್ಟು ಜನಾಂಗವಾಗಿರುವ ಮುಂಡಾಲ ಮತ್ತು ಗೊಡ್ಡ ಸಮುದಾಯದ ಈ ಕಲಾ ಪ್ರಕಾರ ಇಂದು ಗೊಡ್ಡ ಸಮುದಾಯಕ್ಕೆ ಮಾತ್ರ ಸೀಮಿತವಾಗಿದೆ. ಇಂದು ಬಾಕೆ ಮರು ಅಧ್ಯಯನಕ್ಕಾಗಿ ಅದನ್ನು ದಾಖಲೀಕರಣ ಮಾಡಲಾಗುತ್ತಿದೆ ಎಂದರು.

ಅಮೆರಿಕದ ಸಂಶೋಧಕಿ ಡಾ.ಅಮಿ ಕ್ಯಾಟಲಿನ್ ಜೈರಾಜ್ ಬಾಯ್ ಮಾತನಾಡಿ, ಸಾಂಪ್ರದಾಯಿಕ ಕಲೆಗಳು ತನ್ನದೆ ಆದ ವೈಶಿಷ್ಟತೆಯನ್ನು ಹೊಂದಿದೆ. ಅದರ ಸಮಗ್ರ ಅಧ್ಯಯನ ನಿರಂತರವಾಗಿ ನಡೆಯಲೇ ಬೇಕು. ಇದರಿಂದ ಆ ಕಲಾ ಪ್ರಕಾರಗಳನ್ನು ಉಳಿಸಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.

ಚಿತ್ರಕಲಾ ಮಂದಿರದ ಯು.ಸಿ.ನಿರಂಜನ್, ಭಾಷಾ ತಜ್ಞ ಡಾ.ಯು.ಪಿ. ಉಪಾಧ್ಯಾಯ, ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಪ್ರಧಾನ ಕಾರ್ಯದರ್ಶಿ ಗಂಗಾಧರ ಕಿದಿಯೂರು, ಕೋಶಾಧಿಕಾರಿ ಎಂ.ಜಿ.ಚೈತನ್ಯ ಉಪಸ್ಥಿತರಿದ್ದರು. ಉಪನ್ಯಾಸಕ ಪ್ರೊ.ವಿ.ಕೆ.ಾದವ್ ಕಾರ್ಯಕ್ರಮ ನಿರೂ ಪಿಸಿದರು.

ಬಳಿಕ ಕಟಪಾಡಿ ಮಟ್ಟು ಶ್ರೀಗುರುಬ್ರಹ್ಮ ಮುಗ್ಗೇರಕಳ ದೇವ ಸ್ಥಾನದ ಜಗನ್ನಾಥ ಬಂಗೇರ ನೇತೃತ್ವದಲ್ಲಿ ಒಟ್ಟು 16 ಮಂದಿ ಕಲಾವಿದರು ಕಂಗೀಲು ನೃತ್ಯ ಪ್ರದರ್ಶಿಸಿದ್ದು, ಅುಗಳ ದಾಖಲೀಕರಣ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News