×
Ad

ಆಧಾರ್ ಲಿಂಕ್ ಇಲ್ಲದಿದ್ದರೂ ಪಡಿತರ ವಿತರಣೆ

Update: 2017-02-13 21:46 IST

ಉಡುಪಿ, ಫೆ.13: ಉಡುಪಿ ಜಿಲ್ಲೆಯಲ್ಲಿ ರದ್ದಾಗಿರುವ 1,34,063 ಆದ್ಯತಾ ಕುಟುಂಬ (ಬಿಪಿಎಲ್) ಕಾರ್ಡುದಾರರ ಕುಟುಂಬದ ಸದಸ್ಯರಿಗೂ ಇನ್ನೂ ಎರಡು ತಿಂಗಳು ಗ್ರಾಪಂಗಳಲ್ಲಿ, ತಾಲೂಕು ಕಚೇರಿಗಳಲ್ಲಿ, ಜನಸ್ನೇಹಿ ಕೇಂದ್ರಗಳಲ್ಲಿ ಹಾಗೂ ಪ್ರಾಂಚೈಸಿಗಳಲ್ಲಿ ಆಧಾರ್ ನೊಂದಣಿ ಮಾಡಿಕೊಳ್ಳಲು ಮಾ.31ರವರಗೆ ಅವಕಾಶ ಕಲ್ಪಿಸಿರುವುದರಿಂದ ಈ ಹಿಂದೆ ಆಧಾರ್ ನೊಂದಣಿ ಮಾಡಿಕೊಂಡಿರದ ಫಲಾನುಭವಿಗಳಿಗೂ ತಲಾ 5 ಕೆಜಿಯಂತೆ ಆಹಾರ ಧಾನ್ಯವನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ.

ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಲಾಗಿದೆ. ಇದರೊಂದಿಗೆ ಈ ತಿಂಗಳಿನಿಂದ ರೂ.33ಕ್ಕೆ ಒಂದು ಕೆಜಿ ಹೆಸರು ಕಾಳನ್ನು ಪ್ರತಿ ಕಾರ್ಡಿಗೆ ಒಂದು ಕೆಜಿಯಂತೆ ವಿತರಿಸಲು ಕ್ರಮವಹಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.        

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News