ಕಟಪಾಡಿ ರಾಷ್ಟ್ರಮಟ್ಟದ ಕ್ರಿಕೆಟ್ ಪಂದ್ಯಾಟ : ಎ.ಕೆ.ಸ್ಪೋರ್ಟ್ಸ್ ವಿನ್ನರ್, ನ್ಯಾಶ್ ಬೆಂಗಳೂರು ರನ್ನರ್
ಕಾಪು, ಫೆ.13: ಫ್ರೆಂಡ್ಸ್ ಕಟಪಾಡಿ ಆಶ್ರಯದಲ್ಲಿ ಮೂರು ದಿನಗಳ ಕಾಲ ಕಟಪಾಡಿ ಪಳ್ಳಿಗುಡ್ಡೆ ನೆಹರೂ ಮೈದಾನದಲ್ಲಿ ಜರಗಿದ 3ನೆ ರಾಷ್ಟ್ರ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಕೂಟದ ಪ್ರಶಸ್ತಿಯನ್ನು ಉಡುಪಿಯ ಎ.ಕೆ.ಸ್ಪೋರ್ಟ್ಸ್ ತಂಡ ಗೆದ್ದುಕೊಂಡಿದೆ.
ಫೈನಲ್‌ನಲ್ಲಿ ಎ.ಕೆ.ಸ್ಪೋರ್ಟ್ಸ್ ತಂಡ ನ್ಯಾಶ್ ಬೆಂಗಳೂರು ತಂಡವನ್ನು 14ರನ್‌ಗಳ ಅಂತರದಲ್ಲಿ ಸೋಲಿಸಿ ಎರಡು ಲಕ್ಷ ರೂ. ನಗದು ಮತ್ತು ಶಾಶ್ವತ ಫಲಕವನ್ನು ತನ್ನದಾಗಿಸಿತು. ರನ್ನರ್ ಅಫ್ ನ್ಯಾಶ್ ಬೆಂಗಳೂರು ತಂಡ ಒಂದು ಲಕ್ಷ ರೂ. ನಗದು ಮತ್ತು ಶಾಶ್ವತ ಫಲಕವನ್ನು ಪಡೆದುಕೊಂಡಿತು.
ಫೈನಲ್ ಪಂದ್ಯಾಟದ ಪಂದ್ಯಶ್ರೇಷ್ಟ ಮತ್ತು ಬೆಸ್ಟ್ ಬೌಲರ್ ಪ್ರಶಸ್ತಿಯನ್ನು ಎ.ಕೆ. ತಂಡದ ಹಮೀದ್ ಪಡೆದರೆ, ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಆರೀಫ್ ಮುಕ್ಕ ಪಡೆದರು. ಬೆಸ್ಟ್ ಬ್ಯಾಟ್ಸ್‌ಮೆನ್ ಪ್ರಶಸ್ತಿಯನ್ನು ನ್ಯಾಶ್ ಬೆಂಗಳೂರಿನ ಜಾನ್ ಪಡೆದುಕೊಂಡರು.
ರವಿವಾರ ನಡೆದ ಸಮಾರೋಪ ಸಮಾರಂಭದಲ್ಲಿ ದ.ಕ. ಮತ್ತು ಉಡುಪಿ ಜಿಲ್ಲಾ ಮೀನುಮಾರಾಟ ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ ಪ್ರಶಸ್ತಿ ವಿತರಿಸಿದರು. ಕೆ.ಆರ್.ಎಸ್ ಕ್ರಿಕೆಟ್ ಅಕಾಡೆಮಿ ಸಿ.ಇ.ಒ ಶುಕೂರ್ ಸಾಹೇಬ್, ಡಾ.ಯು.ಕೆ.ಶೆಟ್ಟಿ, ಗಣೇಶ್ ಕುಮಾರ್ ಮಟ್ಟು, ಸುಭಾಸ್ ಬಲ್ಲಾಳ್, ಸುಶೀಲ್ ಬೋಳಾರ್, ರತ್ನಾಕರ್ ಕೋಟ್ಯಾನ್, ಇಮ್ರಾನ್ ಕಟಪಾಡಿ, ಜಗದೀಶ್ ಕಾಮತ್, ಆಸಿಫ್ ಮೈತ್ರಿ, ಗಂಗಾಧರ್, ಶಿವ ಪ್ರಸಾದ್ ಉಪಸ್ಥಿತರಿದ್ದರು.
ಫ್ರೆಂಡ್ಸ್ ಕಟಪಾಡಿ ಅಧ್ಯಕ್ಷ ಅಶೀದುಲ್ಲಾ ಸ್ವಾಗತಿಸಿದರು. ವಿನಯ್ ಉದ್ಯಾ ವರ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸೃಜನ್ ವಂದಿಸಿದರು.