ಗಾಂಜಾ ಸೇವನೆ: ಯುವಕನ ಬಂಧನ
Update: 2017-02-13 22:06 IST
ಮಂಗಳೂರು, ಫೆ.13: ನಗರದ ಕುಲಶೇಖರ ಮಾರುಕಟ್ಟೆಯ ಬಳಿ ಸೋಮವಾರ ಗಾಂಜಾ ಸೇವನೆ ಮಾಡುತ್ತಿದ್ದ ಬಿಕರ್ನಕಟ್ಟೆಯ ಲ್ಯಾಟ್‌ವೊಂದರ ನಿವಾಸಿ ಶಮೀಮ್(23) ಎಂಬಾತನನ್ನು ಕದ್ರಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಕದ್ರಿ ಪೊಲೀಸ್ ಠಾಣಾ ಅಪರಾಧ ವಿಭಾಗದ ಪಿಎಸ್‌ಐ ಶಂಕರ್ ನಾಯರ್ ಅವರು ಸಿಬ್ಬಂದಿ ಜೊತೆ ಗಸ್ತಿನಲ್ಲಿದ್ದಾಗ ಆರೋಪಿಯನ್ನು ಕಂಡು ವಿಚಾರಣೆ ನಡೆಸಿ ವಶಕ್ಕೆ ಪಡೆದಿದ್ದು, ಬಳಿಕ ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢವಾಗಿದೆ. ಎನ್‌ಡಿಪಿಎಸ್ ಕಾಯ್ದೆಯಡಿ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.